ಕಲಬುರಗಿ | 'ಅರಳುವ ಮಕ್ಕಳಿಗೆ ಉದರ ಹೂವು' ಪ್ರಶಸ್ತಿ ಪ್ರದಾನ
ಕಲಬುರಗಿ : ಸಮಾಜದ ಮಕ್ಕಳ ಮುಖದಲ್ಲಿ ಸಮೃದ್ಧಿಯನ್ನು ಕಾಣುವ ಮನೋಧರ್ಮ ಸಮಾಜಮುಖಿಯಾದುದು ಎಂದು ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ.ಸದಾನಂದ ಪೆರ್ಲ ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ಸುಪುತ್ರಿ ಸಮೃದ್ಧಿಯ ಸ್ಮರಣಾರ್ಥ ಇಲ್ಲಿನ ಸಮೃದ್ಧಿ ಫೌಂಡೇಶನ್ ವತಿಯಿಂದ ನಗರದಲ್ಲಿ ಮಂಗಳವಾರ ಏರ್ಪಡಿಸಿದ 'ಅರಳುವ ಮಕ್ಕಳಿಗೆ ಉದರ ಹೂವು' ಎಂಬ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಮಕ್ಕಳ ತನ್ನ ಮಕ್ಕಳೆಂದು ಭಾವಿಸುವ ಸಂದೇಶ ಸಮೃದ್ಧಿ ಫೌಂಡೇಶನ್ ಸಾರುತ್ತಿದೆ. ಇದು ಪ್ರೇರಣೆ ಮತ್ತು ಆದರ್ಶವಾದ ಹೆಜ್ಜೆಯಾಗಿದೆ. ಮಕ್ಕಳನ್ನು ಸಂಸ್ಕಾರ ಸಂಸ್ಕೃತಿಗಳೊoದಿಗೆ ಬೆಳೆಸುವ ಜವಾಬ್ದಾರಿ ಈಗೀನ ಪಾಲಕರ ಮೇಲಿದೆ. ಅಂಕದ ಬೆನ್ನು ಹತ್ತುವ ಜಾಯಮಾನ ಬಿಟ್ಟು ಮಕ್ಕಳ ಸಾಮರ್ಥ್ಯ ತಿಳಿದು ಬೆಳೆಸುವ ಜವಬ್ದಾರಿ ಇದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಬಸವರಾಜ ಬಳ್ಳುಂಡಗಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಡಾ.ಜಗನ್ನಾಥ ಎಲ್ ತರನಳ್ಳಿ, ಚಿತ್ರ ಕಲಾವಿದ ಡಾ.ರೆಹಮಾನ್ ಪಟೇಲ್, ಧರ್ಮರಾಜ ಜವಳಿ, ಭವಾನಿಸಿಂಗ್ ಠಾಕೂರ, ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ರಮೇಶ ಬಡಿಗೇರ, ಪ್ರಮುಖರಾದ ನಾಗಪ್ಪ ಎಂ.ಸಜ್ಜನ್, ವಿಶ್ವನಾಥ ಮಂಗಲಗಿ, ಅಮೃತಪ್ಪ ಅಣೂರ ಕವಿಗಳು, ಶಾಂತಲಿoಗ ಪಾಟೀಲ ಕೋಳಕೂರ, ರೂಪಾ ಪೂಜಾರಿ, ಮಂಜುನಾಥ ಕಂಬಾಳಿಮಠ, ಮಲ್ಲಿನಾಥ ಸಂಗಶೆಟ್ಟಿ, ಗಣೇಶ ಚಿನ್ನಾಕಾರ, ಶ್ರೀಕಾಂತ ಪಾಟೀಲ ತಿಳಗೂಳ, ಬಾಬುರಾವ ಪಾಟೀಲ, ಮಹ್ಮದ್ ಅಯಾಜುದ್ದೀನ್ ಪಟೇಲ್, ರಾಜಶೇಖರ ಶ್ಯಾಮಣ್ಣ, ರಜನಿ ಜಮಾದಾರ, ಡಾ. ಬಾಬುರಾವ ಶೇರಿಕಾರ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ಮಲ್ಲಿನಾಥ ದೇಶಮುಖ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಿಮಿಕ್ರಿ ಕಲಾವಿದ ವಾಸು ಎನ್.ಪಾಟೀಲ, ವಿಜ್ಞಾನ ಕ್ಷೇತ್ರದ ಅಮತುಲ್ ಅಹದ್ ರುಷ್ದಾ, ಭರತನಾಟ್ಯ ಕಲಾವಿದೆ ಶ್ರೇಯಾ ಎಸ್.ಪಾಟೀಲ, ಸುಕನ್ಯಾ ಚಿದ್ರಿ ಹುಳಗೇರಾ, ಬಹುಮುಖ ಪ್ರತಿಭಾವಂತೆ ಮಹೇಶ್ವರಿ ಷಣ್ಮುಖರೂಡ ಅವರನ್ನು ಉದರದ ಹೂವು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.