ಕಲಬುರಗಿ | ಕೇಬಲ್ ಉತ್ಪಾದನಾ ಘಟಕ ಸ್ಥಾಪನೆ ಹಿನ್ನೆಲೆ : ದಕ್ಷಿಣ ಕೋರಿಯಾದ ನಿಯೋಗ ಭೇಟಿ

Update: 2025-04-24 20:51 IST
ಕಲಬುರಗಿ | ಕೇಬಲ್ ಉತ್ಪಾದನಾ ಘಟಕ ಸ್ಥಾಪನೆ ಹಿನ್ನೆಲೆ : ದಕ್ಷಿಣ ಕೋರಿಯಾದ ನಿಯೋಗ ಭೇಟಿ
  • whatsapp icon

ಕಲಬುರಗಿ : ಕಲಬುರಗಿಯಲ್ಲಿ ಕೇಬಲ್ ಉತ್ಪಾದನಾ ಘಟಕ ಮತ್ತು ಗೋದಾಮು ಸೌಲಭ್ಯವನ್ನು ಸ್ಥಾಪಿಸುವ ಸಂಬಂಧ ಗುರುವಾರ ದಕ್ಷಿಣ ಕೋರಿಯಾದ 3ಸಿ ಟೇ ಯಾಂಗ್‌ನ ಸ್ಥಾಪಕ ಮತ್ತು ಸಿಇಓ ಚಾಂಗ್-ಸೂನ್ ಹ್ವಾಂಗ್ ನೇತೃತ್ವದ ನಿಯೋಗವು ಕಲಬುರಗಿಗೆ ಭೇಟಿ ನೀಡಿತು.

ಕಲಬುರಗಿಯ ನಂದೂರ್-ಕೆಸರಟಗಿ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ನಿಯೋಗ ಇಲ್ಲಿನ ಪರಿಸರ ವ್ಯವಸ್ಥೆ ಮತ್ತು ಭೂಮಿಯನ್ನು ಪರಿಶೀಲಿಸಿ ಲಭ್ಯವಿರುವ ಇತರೆ ಸೌಲಭ್ಯಗಳು ಮತ್ತು ಸರ್ಕಾರದ ನೀತಿ ನಿಯಮಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಿತು‌.

ಕೇಬಲ್ ಉತ್ಪಾದನಾ ಘಟಕ ಸ್ಥಾಪನೆಯಾದರೆ ಜಿಲ್ಲೆಗೆ ವಿದೇಶಿ ನೇರ ಹೂಡಿಕೆ ಬರಲಿದ್ದು, ಸ್ಥಳೀಯವಾಗಿ 100 ಉದ್ಯೋಗಗಳು ಸಹ ಸೃಷ್ಠಿಯಾಗಲಿದೆ.

ಈ ವೇಳೆ ಜಿಲ್ಲಾ ಕೈಗಾರಿಕೆ ಕೇಂದ್ರದ ಉಪನಿರ್ದೇಶಕ ಅಬ್ದುಲ್ ಅಜೀಮ್, ಕೆ.ಐ.ಎ.ಡಿ.ಬಿ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಪರಮೇಶ್ವರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News