ಕಲಬುರಗಿ | ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅತ್ಯುತ್ತಮ ಸೇವಾ ಪುರಸ್ಕಾರ
Update: 2024-11-28 21:29 IST

ಕಲಬುರಗಿ : ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸೇವಾ ಸಿಬ್ಬಂದಿಗಳಿಗೆ ಡಿಟಿಎಸ್ ಎಸ್ ಏಜೆನ್ಸೀಸ್ ಅವರು ಅತ್ಯುತ್ತಮ ಕಾರ್ಯ ನಿರ್ವಾಹಕ ಸೇವಕ ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು, 8 ಜನ ಸೇವಾ ಸಿಬ್ಬಂದಿಗಳಿಗೆ ಅವರ ಸೇವಾ ಕ್ಷಮತೆಯನ್ನು ಮೆಚ್ಚಿ ನಗದು ಬಹುಮಾನ ಹಾಗೂ ಸಂಸ್ಥೆಯ ಪ್ರಮಾಣ ಪತ್ರ ನೀಡಿ ಪುರಸ್ಕರಿಸಿದರು.
ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಬಸವೇಶ್ವರ ಆಸ್ಪತ್ರೆಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ.ಕಿರಣ್ ದೇಶಮುಖ್, ಡಾ.ಶಿವಾನಂದ ಮೇಳಕುಂದಿ, ವೈದ್ಯಾಧಿಕಾರಿಗಳಾದ ಡಾ.ಆನಂದ ಪಾರಂಪಳ್ಳಿ, ಡಾ.ಗುರು ಪಾಟೀಲ್ ಹಾಗೂ ಡಿಟಿಎಸ್ ಎಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.