ಕಲಬುರಗಿ | ಯಡ್ರಾಮಿ ಅತ್ಯಾಚಾರ ಪ್ರಕರಣದಲ್ಲೂ ಕೋಮುವಾದ : ಡಾ.ಮೀನಾಕ್ಷಿ ಬಾಳಿ

Update: 2024-12-13 09:58 GMT

ಕಲಬುರಗಿ : ಯಡ್ರಾಮಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿದ ಪ್ರಕರಣವು ಖಂಡನಾರ್ಹ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಆದಾಗ್ಯೂ, ಅತ್ಯಾಚಾರ ಪ್ರಕರಣವನ್ನೇ ಕೋಮುವಾದಿ ಶಕ್ತಿಗಳು ಕೋಮುವಾದಕ್ಕೆ ಬಳಸಿಕೊಂಡಿದ್ದು ಸರಿಯಲ್ಲ ಎಂದು ಸೌಹಾರ್ದ ಕರ್ನಾಟಕ ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಅತ್ಯಾಚಾರ ಪ್ರಕರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಜನವಾದಿ ಮಹಿಳಾ ಸಂಘಟನೆಯವರು ಯಡ್ರಾಮಿಗೆ ಹೋಗಿ ಸಂತ್ರಸ್ತ ಬಾಲಕಿಗೆ ಹಾಗೂ ಕುಟುಂಬಕ್ಕೆ ಸಾಂತ್ವನ, ಧೈರ್ಯ ಹಾಗೂ ಪರಿಹಾರದ ಕುರಿತು ಮಾತನಾಡಲು ಬಯಸಿದ್ದೆವು. ಅದಾಗಲೇ ಇಡೀ ಪ್ರಕರಣವನ್ನು ಒಂದು ಕೋಮಿನ ವಿರುದ್ಧ ಕೋಮುವಾದಿಗಳು ತಗೆದುಕೊಂಡಿದ್ದರಿಂದ ಸ್ಥಳಕ್ಕೆ ನೀವು ಬರಬೇಡಿ ಎಂದು ಸ್ಥಳೀಯ ಸಂಘಟಕರು ನಮಗೆ ಹೇಳಿದರು. ಹಾಗಾಗಿ ನಾವು ಅಲ್ಲಿಗೆ ಹೋಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಆರೋಪಿಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ. ಅವರನ್ಜು ಆರೋಪಿಗಳೆಂದು ನೋಡಬೇಕೇ ಹೊರತು, ಆರೋಪಿಯ ಧರ್ಮ, ಜಾತಿಯನ್ನು ಹಿಡಿದು, ಆ ಧರ್ಮ ಹಾಗೂ ಜಾತಿಯ ವಿರುದ್ಧ ದೂರುವುದು ಸರಿಯಲ್ಲ. ಕೋಮುವಾದದ ಬದಲು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಂತಹ ಕಾರ್ಯವನ್ನು ಮಾಡುವಲ್ಲಿ ಕೋಮುವಾದಿಗಳು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಕೆ ಹುಡಗಿ, ಕಾಶಿನಾಥ್ ಅಂಬಲಗೆ, ಧನರಾಜ ತಾಂಬೋಲೆ, ಸುಧಾಮ್ ಧನ್ನಿ, ಲವಿತ್ರ ವಸ್ತ್ರದ, ಪ್ರಭು ಖಾನಾಪುರೆ, ಮಲ್ಲಿಕಾರ್ಜುನ್ ವಡ್ಡನಕೇರಿ, ಮಹಾಂತೇಶ ಕಲಬುರಗಿ ಸೇರಿದಂತೆ ಮತ್ತಿತರರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News