ಕಲಬುರಗಿ | ಡಾ.ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ದತ್ತಾತ್ರೇಯ ಇಕ್ಕಳಕಿಗೆ ಸನ್ಮಾನ

Update: 2025-04-10 17:45 IST
ಕಲಬುರಗಿ | ಡಾ.ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ದತ್ತಾತ್ರೇಯ ಇಕ್ಕಳಕಿಗೆ ಸನ್ಮಾನ
  • whatsapp icon

ಕಲಬುರಗಿ: 2025-26ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ದತ್ತಾತ್ರೇಯ ಇಕ್ಕಳಕಿ ಅವರಿಗೆ ಜಿಲ್ಲೆಯ ವಿವಿಧ ಅಧಿಕಾರಿಗಳು ಸನ್ಮಾನಿಸಿ, ಅವರನ್ನು ಗೌರವಿಸಿದರು.

ನಗರದಲ್ಲಿರುವ ದತ್ತಾತ್ರೇಯ ಇಕ್ಕಳಕಿ ಅವರ ನಿವಾಸಕ್ಕೆ ತೆರಳಿದ ಸಮಾಜ‌ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಹಾಗೂ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ್ ಅವರು ಆತ್ಮೀಯವಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಮಾಜ‌ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News