ಕಲಬುರಗಿ | ಕೇಂದ್ರ ಕಾರಾಗೃಹದ ಕೈದಿಗಳಿಗೆ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ವಿತರಣೆ

ಕಲಬುರಗಿ : ಕೇಂದ್ರ ಕಾರಾಗೃಹದ ಶಿಕ್ಷಾ ಬಂದಿಗಳಿಗೆ ಸೋಕೇರ್ ಇಂಡ್ ಸಂಸ್ಥೆ ಕಲಬುರಗಿ, ಅದಾನಿ ಸಂಸ್ಥೆ ವಾಡಿ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಕಂಪ್ಯೂಟರ್ ತರಬೇತಿದಾರರಿಗೆ ಪ್ರಮಾಣ ಪತ್ರ, ಕಿಟ್ ವಿತರಿಸುವ ಹಾಗೂ ಪ್ರವಚನ (ಉಪನ್ಯಾಸ) ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಜ್ಞಾನ ಪ್ರಕಾಶ, ವಾಗ್ಮಿಗಳು ಮತ್ತು ಉಪನ್ಯಾಸಕರಾದ ಡಾ.ಪಾವಗಡ ಪ್ರಕಾಶರಾವ್ ಅವರು ಜ್ಞಾನ ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತದನಂತರ ಕಂಪ್ಯೂಟರ್ ತರಬೇತಿ ಪಡೆದ 3ನೇ ತಂಡದ ಪ್ರಮಾಣ ಪತ್ರ ಹಾಗೂ 4ನೇ ತಂಡಕ್ಕೆ ಕಿಟ್ ವಿತರಿಸಿ ಮಾತನಾಡಿ, ನಾವು ನಮ್ಮ ಪ್ರಮಾದಗಳಿಂದ ಜೀವನದಲ್ಲಿ ಏರಿಳಿತಗಳನ್ನು ಕಾಣುತ್ತೇವೆ. ನಾವು ನಮ್ಮ ಪೂರ್ವ ಜನ್ಮದ ಕರ್ಮಗಳನ್ನು ಇಂದು ಅನುಭವಿಸುತ್ತಿದ್ದೇವೆ. ಅದಕ್ಕಾಗಿ ನಾವುಗಳು “ಸಜ್ಜನರ ಸಂಗ ಹೆಜ್ಜೆನು ಸವಿದಂತೆ” ಸತ್ಯವಂತರ ಒಳ್ಳೆಯವರ ಜೊತೆ ಒಡನಾಟವನ್ನು ಬೆಳಿಸಿ ಸಹೋದರತ್ವವನ್ನು ಬೆಳಸಿಕೊಂಡು ಒಳ್ಳೆಯವರಾಗಿ ಉತ್ತಮ ಜೀವನವನ್ನು ನಡೆಸಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಮುಖ್ಯಸ್ಥರಾದ ಡಾ.ಅನಿತಾ ಆರ್. ಮಾತನಾಡಿ, ಬಂದಿಗಳಿಗೆ ಹಿತ ನುಡಿಯನ್ನು ನೀಡಿ ಅವರನ್ನು ಒಳ್ಳೆಯ ವ್ಯಕ್ತಿಯಾಗಿ ಮಾನಸಿಕ, ದೈಹಿಕವಾಗಿ ಸದೃಡವಾದ ಶರೀರವನ್ನು ಕಾಪಡಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಲು ಪಾವಗಡ ಪ್ರಕಾಶ್ ರಾವ್ ಅವರತ್ತ ಕೋರಿದರು.
ಬಂದಿಗಳಿಗೆ ಉತ್ತಮ ಚಾರಿತ್ರಿಕ ಹೊಂದುವಂತಹ ಉಪನ್ಯಾಸವನ್ನು ನೀಡಿ ಬಂದಿಗಳಲ್ಲಿ ನವ ಉಲ್ಲಾಸ, ಸ್ಪೂರ್ತಿಯ ಚಿಲುಮೆಯನ್ನು ತುಂಬಿ ಅವರ ಬದುಕಿಗೆ ಉತ್ತಮ ರಸವತ್ತಾದ ಆಮ್ಲಜನಕವನ್ನು ನೀಡಿ ಅವರಲ್ಲಿ ಭರವಸೆ ಮೂಡಿಸಿ ಇಲ್ಲಿಂದ ಬಿಡುಗಡೆ ಹೊಂದಿ ಸಮಾಜ ಮುಖಿಯಾಗಿ ತಮ್ಮ ಕರ್ತವ್ಯವನ್ನು ನೀಡುವಂತಹ ವಾತಾವರಣವನ್ನು ನಿರ್ಮಾಣವನ್ನು ಮಾಡಿದ್ದಕ್ಕಾಗಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕರಾದ ಎಂ.ಹೆಚ್.ಆಶೇಖಾನ್, ವಿಧ್ಯಾಸಾಗರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಶ್ಯಾಮರಾವ್ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಶಿವಯೋಗಪ್ಪ, ಹರಿಷ್ ಗೌಳಿ ಹಾಗೂ ಈ ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾದ ಭೀಮಾಶಂಕರ ಡಾಂಗೆ, ಸಂಸ್ಥೆಯ ಜೈಲರ್‍ಗಳಾದ ಸುನಂದ, ಸಾಗರ ಪಾಟೀಲ, ಶ್ರೀಮಂತಗೌಡ ಪಾಟೀಲ, ಶಾಮ ಬಿದ್ರಿ ಹಾಗೂ ಕಾರಾಗೃಹದ ಲಿಪಿಕ/ಕಾರ್ಯನಿರ್ವಾಹಕ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದ್ದರು. ನಾಗರಾಜ ಮುಲಗೆರವರು ನಿರೂಪಣೆಯೊಂದಿಗೆ ಕಾರ್ಯಕ್ರಮವನ್ನು ನಡಸಿಕೊಟ್ಟರು.