ಕಲಬುರಗಿ | ಧರ್ಮಸ್ಥಳ ಯೋಜನೆಯಿಂದ ವಾತ್ಸಲ್ಯ ಕಿಟ್ ವಿತರಣೆ

Update: 2024-12-13 13:04 GMT

ಕಲಬುರಗಿ : ಧರ್ಮಸ್ಥಳ ಯೋಜನೆಯ ಪವಿತ್ರತೆಯ ಮುಖವಾಗಿ, ಡಾ.ವೀರೇಂದ್ರ ಹೆಗ್ಗಡೆ ಹಾಗೂ ಡಾ.ವಿ.ಹೇಮಾವತಿ ಅವರ ಪ್ರೇರಣೆಯಿಂದ ʼಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮʼದಡಿ ಪ್ರತೀ ತಿಂಗಳು ನಿರ್ಗತಿಕರಿಗೆ ಮಾಸಾಶನ ವಿತರಣೆ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಕೃಷ್ಣಪ್ಪ ಬೆಳವಣಕಿ ಅವರು ಹೇಳಿದರು.

ಆಳಂದ ಪಟ್ಟಣದಲ್ಲಿ ಮಾತನಾಡಿ, ಈ ಪ್ರಕ್ರಿಯೆಯ ಅಂಗವಾಗಿ ಈ ಬಾರಿ ಧರ್ಮಸ್ಥಳ ಯೋಜನೆಯಿಂದ 16 ಕಿಟ್ ಗಳನ್ನು ವಾತ್ಸಲ್ಯ ಸದಸ್ಯರಿಗೆ ವಿತರಿಸಲಾಗಿದೆ. ವಾತ್ಸಲ್ಯ ಕಿಟ್ ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ ದಿನಬಳಕೆಯ ಅಗತ್ಯ ವಸ್ತುಗಳನ್ನು ಒಳಗೊಂಡಿವೆ. ಫಲಾನುಭವಿಗಳು ಇದರ ಲಾಭಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ದಿಲೀಪ ಕ್ಷಿರಸಾಗರ, ನಿವೃತ್ತ ಶಿಕ್ಷಕ ಅಪ್ಪಸಾಬ, ಜ್ಞಾನವಿಕಾಸ ಸಮನ್ವಯಾಧಿಕಾರಿ ರೇಣುಕಾ ಹಿರೇಕುಡಿ, ವಲಯ ಮೇಲ್ವಿಚಾರಕಿ ಶ್ರುತಿ, ಕ್ಷೇತ್ರ ಪಾಲಕ ಉಮೇಶ ದಬಡೇ ಪಾಲ್ಕೊಂಡಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News