ಕಲಬುರಗಿ | ಜಿಲ್ಲಾ ವಿಜ್ಞಾನ ಕೇಂದ್ರದ ವತಿಯಿಂದ ಸಮಗ್ರ ಬೇಸಿಗೆ ವಿಜ್ಞಾನ ಶಿಬಿರ ಆಯೋಜನೆ
ಕಲಬುರಗಿ : ಗುಲ್ಬರ್ಗಾ ಜಿಲ್ಲಾ ವಿಜ್ಞಾನ ಕೇಂದ್ರದಿಂದ (4,5,6 ಹಾಗೂ 7ನೇ ತರಗತಿಯಲ್ಲಿ ಹಾಗೂ 8,9 ಹಾಗೂ 10ನೇ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ) ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಎ.14 ರಿಂದ ಮೇ 10ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಸಮಗ್ರ ಬೇಸಿಗೆ ವಿಜ್ಞಾನ ಶಿಬಿರವನ್ನು ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಜ್ಞಾನ ಕೇಂದ್ರದ ಜಿಲ್ಲಾ ವಿಜ್ಞಾನ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
8, 9 ಮತ್ತು 10ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಸಂತಸ, ಜೀವಶಾಸ್ತ್ರ, ಸೃಜನಾತ್ಮಕ ಗಣಿತದ ಕಾರ್ಯಾಗಾರ, ವರ್ಣರಂಜಿತ ರಸಾಯನಶಾಸ್ತ್ರ, ಎಲೆಕ್ಟ್ರಾನಿಕ್ಸ್ ಹಾಗೂ ರೊಬೊಟಿಕ್ಸ್ ಕೋರ್ಸ್‍ಗಳ ಶಿಬಿರವನ್ನು ಹಾಗೂ 4ನೇ, 5ನೇ, 6ನೇ ಮತ್ತು 7ನೇ ತರಗತಿಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೃಜನಶೀಲತೆಯೊಂದಿಗೆ ವಿಜ್ಞಾನವನ್ನು ಅನ್ವೇಷಿಸುವುದು ಕೋರ್ಸ್‍ಗಳ ವಿಜ್ಞಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದ ಶುಲ್ಕ 1,000 ರೂ. ಇರುತ್ತದೆ. ಯಾವುದೇ ಮೂರು ಕೋರ್ಸ್‍ಗಳಿಗೆ ಒಟ್ಟಿಗೆ ಶುಲ್ಕ 2,500 ರೂ. ಮಾತ್ರ ಪಾವತಿಸಬಹುದಾಗಿದೆ.
ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಂವಾದಾತ್ಮಕ ಪ್ರಯೋಗಗಳೊಂದಿಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ತಾವು ತಯಾರಿಸಿರುವ ಕೆಲವು ಮಾದರಿಗಳು / ಕಿಟ್‍ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಪ್ರತಿ ಬ್ಯಾಚ್‍ನಲ್ಲಿ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ನೋಂದಣಿ ಸೀಮಿತವಾಗಿದ್ದು, ಮೊದಲು ಬಂದವರ ಆದ್ಯತೆ ಮೇರೆಗೆ ಅವಕಾಶ ನೀಡಲಾಗುತ್ತದೆ. ಎ 4 ರಿಂದ ಶನಿವಾರ ಮತ್ತು ಭಾನುವಾರ ಸೇರಿದಂತೆ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 05 ಗಂಟೆಯವರೆಗೆ ಶುಲ್ಕವನ್ನು ಪಾವತಿಸಬೇಕು. ಶಿಬಿರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-270608 ದೂರವಾಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ 9788078048 / 9447541616 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.