ಕಲಬುರಗಿ | ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಖಂಡಿಸಿ ವೈದ್ಯರಿಂದ ಕ್ಯಾಂಡಲ್ ಮಾರ್ಚ್

ಕಲಬುರಗಿ : ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪೆಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದರ ಕೃತ್ಯ ಖಂಡಿಸಿ ಸೋಮವಾರ ಸಂಜೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವೃಂದಗಳ ಸಂಯುಕ್ತಾಶ್ರಯದಲ್ಲಿ ವೈದ್ಯರು ಮತ್ತು ವೈದ್ಯೇತರ ಸಿಬ್ಬಂದಿ ಮೇಣದ ಬತ್ತಿಯ ಮೆರವಣಿಗೆ ನಡೆಸಿ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಡಿ.ಸಿ. ಕಚೇರಿ ವರೆಗೆ ನಡೆದ ಕ್ಯಾಂಡಲ್ ಮಾರ್ಚ್ ನಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ವೈದ್ಯರು ಭಾಗವಹಿಸಿ ಭಯೋತ್ಪಾದಕರ ದಾಳಿಗೆ ಬಲಿಯಾದವರಿಗೆ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದಲ್ಲದೆ, ದುಷ್ಕೃತ್ಯ ನಡೆಸಿದ ಭಯೋತ್ಪಾದಕರು ಮತ್ತು ಉಗ್ರ ಸಂಘಟನೆಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ. ಶಂಕ್ರಪ್ಪ ಮೈಲಾರ, ವಿಭಾಗಿಯ ಉಪನಿರ್ದೇಶಕ ಹಾಗೂ ಐ.ಎಂ.ಎ ಅದ್ಯಕ್ಷ ಡಾ.ಶರಣಬಸಪ್ಪ ಗಣಜಲಖೇಡ್, ಡಿ.ಎಚ್.ಓ ಡಾ.ಶರಣಬಸವಪ್ಪಾ ಕ್ಯಾತನಾಳ, ಆರ್.ಸಿ.ಎಚ್.ಓ ಡಾ.ಸಿದ್ದು ಪಾಟೀಲ್, ಡಾ.ಪ್ರಭುಲಿಂಗ ಮಾನಕರ್, ಜಿಮ್ಸ್ ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಸಂಗೋಳಗಿ, ಸತೀಶ್ ಜೋಶಿ, ಡಾ. ಸಂಧ್ಯಾ ಕನೆಕರ್. ಡಾ.ವಿನೋದ್ ಕುಮಾರ್, ಡಾ.ರವೀಂದ್ರ ನಾಗಲೇಕಾರ್, ಡಾ.ಡಿ.ಎಸ್.ಸಜ್ಜನ್, ಡಾ.ರಾಘವೇಂದ್ರ ಕುಲಕರ್ಣಿ, ಡಾ.ವಿವೇಕಾನಂದ ರೆಡ್ಡಿ, ಡಾ.ಜಯಮ್ಮ, ಡಾ.ರಾಜೇಂದ್ರ, ಮಂಜುನಾಥ್ ಕಂಬಳಿಮಠ್, ಚಂದ್ರಕಾಂತ್ ಏರಿ, ರಾಜಶೇಖರ್ ಕುರಕೋಟಿ, ವಿಜಯಕುಮಾರ್ ಖಜೂರಿ, ಮೋಹನ್ ಗಾಯಕ್ವಾಡ್, ರಾಜಣ್ಣ ಬಿಸುಗುಂಡೆ, ಬಸು ನೆಲೋಗಿ, ಶರಣು ಅರಳಿಮರದ, ವಿಠ್ಠಲ್ ಬಡಿಗೇರ್, ಉಮೇಶ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.