ಕಲಬುರಗಿ | ಕೇಂದ್ರ ಕಾರಾಗೃಹದ ಕೈದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ : ಪ್ರಿಸ್‌ನರ್ ಹೋಪ್ ಮಿನಿಸ್ಟರಿ ಆಫ್ ಇಂಡಿಯಾ ಸಂಸ್ಥೆಯ ವತಿಯಿಂದ ನಗರದ ಹೊರವಲಯದ ಕೇಂದ್ರ ಕಾರಾಗೃಹದ ಕೈದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮನಃ ಪರಿವರ್ತನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಪ್ರಿಸ್ನರ್ ಹೊಪ್ ಮಿನಿಸ್ಟರಿ ಸಂಸ್ಥೆಯ ವೈದ್ಯಾಧಿಕಾರಿ ಡಾ.ಶ್ರೀಕಾಂತ ಎಂ.ಡಿ., ಅವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಈ ಶಿಬಿರದ ಲಾಭವನ್ನು ಪಡೆದುಕೊಂಡು ಉತ್ತಮ ಆರೋಗ್ಯವನ್ನು ಹೊಂದಲು ಕರೆ ನೀಡಿದರು.
ಪ್ರೊ.ಹೋಪ್ ಮಿನಿಸ್ಟರಿ ಆಫ್ ಇಂಡಿಯಾ ಸಂಸ್ಥೆಯ ಅಡಿಯಲ್ಲಿ ಗುರುತಿಸಿಕೊಂಡಿರುವ ಗೋಪಿ (ರೆವರೆಂಡ್) ಮಾತನಾಡಿ, ಶಿಕ್ಷಾ ಅವಧಿಯಲ್ಲಿ ಕಾರಾಗೃಹ ಇಲಾಖೆಯು ಒಳಗಡೆ ಮನ ಪರಿವರ್ತನೆಗೆ ಸಾಕಷ್ಟು ಅವಕಾಶಗಳು ಒದಗಿಸಿ ಕೊಟ್ಟಿದ್ದರಿಂದ ಒಳ್ಳೆಯ ವ್ಯಕ್ತಿಯಾಗಿ ಹೊರಬಂದು ಈ ದಿನ ನಿಮ್ಮ ಮುಂದೆ ನಿಂತು ಸಮಾಜ ಮುಖಿಯಾಗಿ ಕಾಯಕವನ್ನು ನಿರ್ವಹಿಸುತ್ತಿದ್ದೇನೆ. ಇದಕ್ಕೆ ಪೂರಕ ಕಾರಾಗೃಹ ಇಲಾಖೆ ವತಿಯಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿಕೊಟ್ಟಿರುವ ಸಂಸ್ಥೆಯ ಮುಖಾಂತರ ಕರ್ನಾಟಕ ರಾಜ್ಯದ ಎಲ್ಲಾ ಕಾರಾಗೃಹದಲ್ಲಿರುವ ಬಂದಿ ಸಹೋದರರಲ್ಲಿ ಆತ್ಮಸ್ಥೆರ್ಯವನ್ನು ತುಂಬುವುದರ ಜೊತೆಗೆ ನಮ್ಮ ತಪ್ಪಿಗೆ ನಮ್ಮ ಕುಟುಂಬ ವರ್ಗವನ್ನು ಕಣ್ಣೀರಿನಲ್ಲಿ ಕೈ ತೋಳೆಯುವಂತೆ ಮಾಡದೇ ಬಿಡುಗಡೆಯಾಗುವುದಕ್ಕಿಂತ ಮುಂಚೆ ಇಲ್ಲಿ ನೀಡುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಬಿಡುಗಡೆ ನಂತರ ಸಮಾಜ ಮುಖಿಯಾಗಿ ಕೆಲಸದಲ್ಲಿ ತೊಡಗಿ ಎಂದರು.
ಅಧ್ಯಕ್ಷತೆ ವಹಿಸಿದ ಡಾ. ಅನಿತಾ ಆರ್. ಮಾತನಾಡಿ, ಪ್ರಿಸ್ನರ್ ಹೋಪ್ ಮಿನಿಸ್ಟರಿ ಆಫ್ ಇಂಡಿಯಾ ಸಂಸ್ಥೆಯವರು ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮನಃ ಪರಿವರ್ತನೆ ಅರಿವು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಇಲಾಖೆ ವತಿಯಿಂದ ಅವರಿಗೆ ಅಭಿನಂದನೆ ಸಲ್ಲಿಸಿದರು.
ಈ ಶಿಬಿರದಲ್ಲಿ ಒಟ್ಟು 120 ಬಂದಿಗಳನ್ನು ಚರ್ಮ, ಮದುಮೇಹ, ಬಿ.ಪಿ, ಶೀತ, ಜ್ವರ ಇತರೆ ಕಾಯಿಲೆಗಳ ಸಂಪೂರ್ಣ ತಪಾಸಣೆ ಮಾಡಿ ಉಚಿತವಾಗಿ ಔಷದಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಅರ್ಚನಾ, ಚನ್ನಪ್ಪ, ಸಹಾಯಕ ಅಧೀಕ್ಷಕರು, ಜೈಲರ್ಗಳಾದ ಸುನಂದ ವಿ., ಸಾಗರ ಪಾಟೀಲ, ಶ್ರೀಮಂತಗೌಡ ಪಾಟೀಲ, ಮಹಾದೇವಿ, ಜೋಸೆಪ್, ರವಿ, ಸುಧಾಕರ (ರವೆರೆಂಡ್) ಅನಿತಾ, ಲತಾ, ಸದಸ್ಯರು ಹಾಗೂ ತಂಡದವರು ಭಾಗವಹಿಸಿದರು.
ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ನಡೆಸಿಕೊಟ್ಟರು. ನಿರೂಪಣೆ, ವಂದನಾರ್ಪಣೆಯನ್ನು ನಾಗರಾಜ ಮುಲಗೆ ನೆರವೇರಿಸಿಕೊಟ್ಟರು. ವಿರೇಶ್ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು.