ಕಲಬುರಗಿ | ವಕೀಲರ ಸಂಘದ ನೂತನ ಅಧ್ಯಕ್ಷ ಎಸ್.ವಿ.ಪಸಾರಗೆ ಸನ್ಮಾನ

ಕಲಬುರಗಿ: ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ವಿ.ಪಸಾರ ರವರಿಗೆ ಯುವ ನ್ಯಾಯವಾದಿಗಳ ಸ್ನೇಹಿತರ ಬಳಗ ವತಿಯಿಂದ ಸೋಮವಾರ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕ.ಕ. ಯುವ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಪ್ರತಿಷ್ಠೆ, ಯುವ ನ್ಯಾಯವಾದಿಗಳ ಹಿತ ಕಾಪಾಡುವ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.
ಎಸ್.ವಿ.ಪಸಾರ ರವರು ಮಾತನಾಡಿ, ಎಲ್ಲರ ಆಶೀರ್ವಾದದಿಂದ ಚುನಾಯಿತಗೊಂಡಿದ್ದೇನೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪರಿಮಿತಿಯನ್ನು ನಮ್ಮ ಕಲ್ಯಾಣ ಕರ್ನಾಟಕದ ಹೈಕೋರ್ಟ್ ವ್ಯಾಪ್ತಿ ಗೊಳಪಡಿಸಲು ಪ್ರಯತ್ನ ಹಾಗೂ ರಾಜ್ಯದಲ್ಲಿ ನಮ್ಮ ಸಂಘದ ಸರ್ವಾಂಗೀಣ ಅಭಿವೃದ್ಧಿಪಡಿಸುವೆ ಎಂದು ಭರವಸೆ ನೀಡಿದರು.
ಅರುಣಕುಮಾರ ಲಗಶೆಟ್ಟಿ, ಉದಯಕುಮಾರ ದತ್ತಿ, ಸಂಘದ ಮಾಜಿ ಅಧ್ಯಕ್ಷ ಗುಪ್ತಲಿಂಗ ಬಿರಾದಾರ, ಹಿರಿಯ ವಕೀಲರಾದ ಮಲ್ಲಿಕಾರ್ಜುನ ಕೋಟೆ, ಶಿವಶಂಕರ ಕೊರವಾರ, ಎಸ್.ಎಸ್.ಮಠಪತಿ, ವಿಜಯ ಕುಮಾರ ಪಾಟೀಲ್, ಮಲ್ಲಿಕಾರ್ಜುನ ಬೀಜಪಗೊಳ, ಅರುಣ ಕುಮಾರ ಕುಲಕರ್ಣಿ, ಗುರು ಸ್ವಾಮಿ ಸಂಕಿನಮಠ, ಹಾಲಿ ಉಪಾಧ್ಯಕ್ಷೆ ಜೈಶೀಲಾ ಬೋಡೋಲೆ, ಮಹಿಳಾ ವಕೀಲರಾದ ನಿರ್ಮಲಾ ಹಾಗೂ ಕಛೇರಿ ಸಿಬ್ಬಂದಿಗಳಾದ ರೂಪಾ, ಲಕ್ಷ್ಮೀ ಇತರರು ಉಪಸ್ಥಿತರಿದ್ದರು.