ಕಲಬುರಗಿ | ಸಾಹಿತ್ಯವು ಮನುಷ್ಯರ ಜ್ಞಾನವನ್ನು ಹೆಚ್ಚಿಸುತ್ತದೆ : ಡಾ.ದಾಕ್ಷಾಯಣಿ ಎಸ್.ಅಪ್ಪಾ

Update: 2025-04-16 21:28 IST
ಕಲಬುರಗಿ | ಸಾಹಿತ್ಯವು ಮನುಷ್ಯರ ಜ್ಞಾನವನ್ನು ಹೆಚ್ಚಿಸುತ್ತದೆ : ಡಾ.ದಾಕ್ಷಾಯಣಿ ಎಸ್.ಅಪ್ಪಾ
  • whatsapp icon

ಕಲಬುರಗಿ : ಸಾಹಿತ್ಯ ಭಂಡಾರವು ಮಾವವನ ಜ್ಞಾನವನ್ನು ಹೆಚ್ಚಿಸುತ್ತದೆ ಮತ್ತು ಅವನ ಜೀವನ ಅಭಿವದ್ಧಿ ಪಡಿಸುತ್ತದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ ಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಣಿ ಶರಣಬಸಪ್ಪ ಅಪ್ಪಾ ರವರು ಹೇಳಿದರು.

ನಗರದ ಆದರ್ಶನಗರ ಕಾಲೋನಿಯ ದಾನೇಶ್ವರಿ ಮಂದಿರದಲ್ಲಿ ಶ್ರೀ ಗುರು ಚರಂತಾರ್ಯ ಮಹಾಸ್ವಾಮಿಗಳವರ 21ನೇ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ್ತ ಪೀಠಾಧ್ಯಕ್ಷರಾದ ಡಾ.ಮಹೇಶ್ವರ ಶಿವಾರ್ಚಾಯ ಮಹಾಸ್ವಾಮಿಗಳವರ ಸಾವಯವ ಕೃಷಿ-ಜೇನು ಸಾಕಾಣಿಕೆ-ಗೋಪರಿಕರಗಳ ಪ್ರಾತ್ಯಕ್ಷಿಕೆ, ಚರಂತಾರ್ಯ ಪ್ರಶಸ್ತಿ ಪ್ರದಾನ, ಗ್ರಂಥಗಳ ಲೋಕಾರ್ಪಣೆ, ವಿಶೇಷ ಉಪನ್ಯಾಸ, ಅಭಿನಂದನಾ ಸಮಾರಂಭ, ಯೋಗ-ಸಂಗೀತ –ಹಾಸ್ಯ ಕಾರ್ಯಕ್ರಮ ಉದ್ಟಾಟನೆ ಮಾಡಿ ಮಾತನಾಡಿದರು.

ಕರ್ನಾಟಕದಲ್ಲಿ ಸಾಕಷ್ಟು ಮಹಾನ್ ಶರಣರು, ದಾಸರು, ಕವಿಗಳು ಇದ್ದಂತಹ ಬೀಡು ಇದ್ದು, ಇಂತಹ ಮಹಾನ್‌ ವ್ಯಕ್ತಿಗಳ ವಿಷಯನ್ನು ಓದುವಿಕೆಯಿಂದ ನಾವು ಹೆಚ್ಚಿನ ಜ್ಞಾನವನ್ನು ಪಡೆಯಬಹುದೆಂದರು ಮತ್ತು ನನಗೆ ಗುರು ಚರಂತಾರ್ಯ ಶ್ರೀ ಪ್ರಶಸ್ತಿ ಲಭಿಸಿದ್ದಕ್ಕೆ ಸಂತೋಷವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರು ಹಾಗೂ ಸಂಸ್ಥಾಪಕ ಅಧ್ಯಕ್ಷರು ಮಣೂರು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಡಾ.ಮುಹಮ್ಮದ್ ಫಾರೂಕ್ ಅಹ್ಮದ್ ಆಗಮಿಸಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುರಕ್ಷೆ ನೀಡಿದರು. ಕಾರ್ಯಕ್ರಮದ ವೇದಿಕೆ ಮೇಲೆ ಶಂಕರಾಚಾರ್ಯ ಮಾಮುನಿ, ಶರಣು ಪಪ್ಪಾ, ಶಿವಾನಂದ ಕರ್ಜಗಿ,.ಎಸ್.ವಿ.ಪಾಟೀಲ್ ಗುಂಡೂರು, ವಕೀಲರಾದ ಶರಣಬಸವ ಖೇಣಿ, ಮಕ್ಕಳ ವೈದ್ಯರಾದ ಡಾ.ಅಲ್ಲಮಪ್ರಭು ದೇಶಮುಖ ದಾನೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಓಂ ಪ್ರಕಾಸ ವಸ್ತ್ರದ್, ಅಪ್ಪಾ ಇಂಜಿನೀಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಲಕ್ಷ್ಮೀ ಪಾಟೀಲ್ ಮಾಕಾರವರು ಇದ್ದರು.

ಡಾ.ಸಂಗೀತಾ ಪಾಟೀಲ್ ಹಿರೇಮಠ ಅವರ “ಸಾಹಿತ್ಯ ಸಂಭ್ರಮ” ಹಾಗೂ “ ಜನಪದ ಝರಿ” ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಡಾ.ಶೈಲಜಾ ಬಿ., ಡಾ.ಸಿದ್ಧಲಿಂಗ ದಬ್ಬಾ ರವರು ಸದರಿ ಪುಸ್ತಕ ಪರಿಚಯ ಮಾಡಿದರು.

ಅಂತರ್ ರಾಷ್ಟ್ರೀಯ ಕಲಾವಿದರಾದ ಕೋಗಳಿ ಕೊಟ್ರೇಶ್ ರವರಿಂದ ಹಾಸ್ಯ ರಸಮಂಜರಿ ಹಾಗೂ ಕಿರಣ ಪಾಟೀಲ್ ಸುಖಿ ಮೆಲೋಡಿಯಸ್ ರವರಿಂದ ಸಂಗೀತ ಕಾರ್ಯಕ್ರಮ, ಅಂತರ್ ರಾಷ್ಟ್ರೀಯ ಯೋಗ ಪಟು ಕುಮಾರಿ ಕೆ.ವೈ.ಸೃಷ್ಠಿ ರವರಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಜರುಗಿತು.

ರೇವಯ್ಯ ವಸ್ತ್ರದ್ ಮತ್ತು ನರಸಿಂಹ ದರೋಜಿ ಗಂಗಾವತಿ ಅವರಿಂದ ಸಂಗೀತಾ ಕಾರ್ಯಕ್ರಮ ಜರುಗಿತು. ಶ್ರೀಕಾಂತ ವಸ್ತ್ರದ್ ತಬಲಾ ಸಾಥ್ ನೀಡಿದರು. ಶ್ರೇಯಾ, ಕುಮಾರ ಭುವನ್ ಪಾಟೀಲ್ ಹಿರೇಮಠ ಪ್ರಾರ್ಥನೆ ಗೀತೆ ಹಾಡಿದರು. ಡಾ.ಸಂಗೀತಾ ಪಾಟೀಲ್ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಜು ಕಂಬಾಳಿಮಠ ಸ್ವಾಗತಿಸಿದರು, ಡಾ.ಶಿವಶರಣಪ್ಪ ಮೊತಕಪಲ್ಲಿ ನಿರೂಪಿಸಿದರು. ಮಂಜುನಾಥ ಕಂಬಾಳಿಮಠ ಮತ್ತು ಶ್ರೀಮತಿ ಗಾಯತ್ರಿ ಮಾಮುನಿ ಅಫಜಲಪೂರು ಗುರುರಕ್ಷೆ ಕಾರ್ಯಕ್ರಮ ಸಂಚಾಲನೆ ಮಾಡಿದರು. ಕಾರ್ಯಕ್ರಮದಲ್ಲಿ ಸುನೀತಾ, ಸುಮಾ , ರೇಣುಕಾದೇವಿ, ನಾಗರತನ್ನ ಕೀರ್ತಿ, ಬಸವರಾಜ್ ರವರು ಉಪಸ್ಥಿತರಿದ್ದರು.

ಸಾಧಕರಿಗೆ ಗುರು ರಕ್ಷೆ : ಭವಾನಿಸಿಂಗ್ ಠಾಕೂರ, ಮಂಜುನಾಥ ಕಳಸ್ಕರ, ಬಿ.ಹೆಚ್.ನಿರಗುಡಿ, ಶರಣಬಸಪ್ಪ ವಡ್ಡನಕೇರ ಶಿವಶರಣಪ್ಪ ಮೋತಕಪಲ್ಲ, ಸಿದ್ಧು ಪಾಟೀಲ್ ಚಿಂಚೋಳಿ, ಚಂದ್ರಕಾಂತ ಕಾಳಗಿ, ಡಾ.ವಿಶಾಲಾಕ್ಷಿ ಕರೆಡ್ಡಿ, ಕು.ಮಾಲಾ ಕಣ್ಣಿ, ಎನ್.ಎಸ್.ಪಾಟೀಲ್, ಮಲ್ಲಿಕಾರ್ಜುನ ಕಿಣಗಿ, ಸಂಜೀವಕುಮಾರ ಡೋಂಗರಗಾಂವ್, ರಾಜಕುಮಾರ ಬಂಗರಗಿ, ಉದಯಕುಮಾರ ಪುಲಾರೆ , ಡಾ.ವೆಂಕಟ್ ಜಾಧವ, ಸೋಮಶೇಖರ ತೇಗಲತಿಪ್ಪಿ, ಬಸಯ್ಯ ಸ್ವಾಮಿ ವಚ್ಚಾ, ಪ್ರಕಾಶ ಮಾಲಿಪಾಟೀಲ್ , ಪ್ರದೀಪ ಮಠಪತಿ ರವರಿಗೆ ಗುರು ರಕ್ಷೆ ನೀಡಿ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯೋತ್ಸವ ಪ್ರಸಶ್ತಿ ಪುರಸ್ಕೃತರು 568 ಕೃತಿಗಳ ಕರ್ತೃ ʼ ಅಕ್ಷರ ಬ್ರಹ್ಮʼ ಎಸ್.ವಿ.ಪಾಟೀಲ್ ಗುಂಡೂರು ಅವರ ಕೃತಿಗಳ ಪ್ರದರ್ಶನ ವೇದಿಕೆ ಮುಂಭಾದಲ್ಲಿ ಪ್ರದರ್ಶಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News