ಕಲಬುರಗಿ | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Update: 2025-04-23 17:55 IST
Photo of Protest
  • whatsapp icon

ಕಲಬುರಗಿ : ಕೇಂದ್ರ ಸರ್ಕಾರವು ತನ್ನ ಅಧಿಕಾರವಾದಿಯನ್ನು ದುರುಪಯೋಗ ಪಡಿಸಿಕೊಂಡು, ನಿರಂಕುಶ ಪ್ರಭುತ್ವದಿಂದ ಮೆರೆಯುತ್ತಿದೆ. ಬಹುಮತದ ಪರಮಾಧಿಕಾರದ ಹಂಗಿನಲ್ಲಿ ದೇಶದಲ್ಲಿ ಧರ್ಮದ, ಜಾತಿಯ ಜನಾಂಗೀಯ ವರ್ಣಗಳ ಮೇಲೆ ವಿಭಜನಾ ನೀತಿಯನ್ನು ಅನುಸರಿಸುತ್ತಿರುವುದು ಖಂಡನೀಯವಾದದ್ದು. ವಕ್ಫ್ ಕಾಯಿದೆಯನ್ನು ತಕ್ಷಣವೆ ಕೇಂದ್ರ ಸರಕಾರ ಹಿಂಪಡೆಯಬೇಕೆಂದು ಸಂವಿಧಾನ ರಕ್ಷಣಾ ಸಮಿತಿ ಸದಸ್ಯರು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

ಜೇವರ್ಗಿ ಮತ್ತು ಯಡ್ರಾಮಿ ಅವಳಿ ತಾಲ್ಲೂಕಿನ ಸಂವಿಧಾನ ರಕ್ಷಣಾ ಜನಾಂದೋಲನ ಸಮಿತಿಯ ವತಿಯಿಂದ ಪಟ್ಟಣದ ರಿಲಾಯನ್ಸ್ ಪೆಟ್ರೋಲ್ ಬಂಕ್ ನಿಂದ ತಾಲ್ಲೂಕಾಡಳಿತ ಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳುವುದರ ಮೂಲಕವಾಗಿ ವಕ್ಫ್ ಕಾಯಿದೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗುತ್ತಾ ಸಂವಿಧಾನ ಉಳಿಸಿ ಎಂದು ಕೇಂದ್ರ ಸರಕಾರಕ್ಕೆ ಬುಧವಾರ ಒತ್ತಾಯಿಸಿದರು.

ಸಮಾನತೆ ಧಾರ್ಮಿಕ ಹಕ್ಕುಗಳ ಮೇಲೆ ಗದಪ್ರಹಾರ ಮಾಡಿ, ದೇಶದಲ್ಲಿ ಮುಸ್ಲಿಂರ ಮೇಲೆ ವಕ್ಫ್ ಎಂಬ ಕಾಯಿದೆಯನ್ನು ಹೇರಿ, ಮುಸ್ಲಿಂರನ್ನು ಮುಗಿಸಲು ಹುನ್ನಾರ ನಡೆದಿದೆ ಎಂದು ಸಂವಿಧಾನ ರಕ್ಷಣಾ ಜನಾಂದೋಲನ ಸಮಿತಿಯು ಆಪಾದಿಸಿದೆ. ದೇಶದಲ್ಲಿ ಶಾಂತಿ, ನೆಮ್ಮದಿ, ಆತಂಕವನ್ನು ಉಂಟು ಮಾಡಿ ಅರಾಜಕತೆಯನ್ನು ಸೃಷ್ಟಿ ಮಾಡಿ, ಕೇಂದ್ರ ಸರ್ಕಾರವು ಒಟ್ಟಾರೆಯಾಗಿ ಅಲ್ಪಸಂಖ್ಯಾತರ ಮೇಲೆ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

ಎಲ್ಲಾ ಧರ್ಮಗಳ ಅನುಯಾಯಿಗಳು ತಮ್ಮ ಮೂಲಭೂತ ಹಕ್ಕುಗಳನ್ನ ಹೊಂದಿದ್ದಾರೆ. ಹಲವು ವಿರೋಧಗಳ ನಡುವೆಯೂ ಬಹುಮತದ ಆಧಾರದ ಮೇಲೆ ವಕ್ಫ್ ಮಸೂದೆಯನ್ನು ಅಂಗೀಕರಿಸುವುದರ ಮೂಲಕ, ದೇಶದ ಮುಸ್ಲಿಂಮರಿಗೆ ನೋವುಂಟು ಮಾಡುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ಈ ಕಾಯಿದೆಯಲ್ಲಿ ಮುಸ್ಲಿಂಮೇತರ ಸದಸ್ಯರನ್ನು ಸೇರಿಸಿರುವುದು ಕಾನೂನು ಬಾಹಿರವಾಗಿದೆ. ವಕ್ಫ್ ಮಸೂದೆಯನ್ನು ಹಿಂಪಡೆದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮೌಲಾನ ಯುಸುಫ್ ಕಣ್ಣಿ, ಮೌಲಾನ ಶರ್ಫುದಿನ್, ಮಹೇಶ ರಾಠೋಡ, ಬಾಬು ಬಿ ಪಾಟೀಲ್, ಇಬ್ರಾಹಿಂ ಪಟೇಲ್ ಯಾಳವಾರ, ರಾಜಶೇಖರ ಸೀರಿ, ಚಂದ್ರಶೇಖರ ಹರನಾಳ, ಶಾಂತಪ್ಪ ಕುಡಲಗಿ, ಸಿದ್ರಾಮ ಕಟ್ಟಿ, ಮೊಯಿನುದ್ದೀನ್ ಇನಾಂದಾರ್, ಅಲ್ಲಬಕಾಸ್ಬಾಗಬಾನ್, ರೌಫ್ ಹವಲ್ದಾರ್, ಅಬ್ದುಲ್ ಮಾಜೀದ್ ಗಿರಣಿ, ಸೋಫಿ ಸಾಬ್ ಗಂವ್ಹಾರ್, ಖಾಸಿಂ ಪಟೇಲ್ ಮುದ್ವಾಳ, ದಾವುದ್ ಇನಾಮದಾರ್, ಅಜ್ಜು ಲಕಪತಿ, ರಾಜಾಪಟೇಲ್ ಯಾಳವಾರ, ಭೀಮರಾಯ ನಗನೂರ, ಇಬ್ರಾಹಿಂ ಪಟೇಲ್, ಬಿ ಎಸ್ ಮಾಲಿಪಾಟಲ್, ನೀಸಾರ ಇನಾಮದಾರ, ಪರಮಾನಂದ ಯಲಗೋಡ, ಮಹೀಬೂಬ ಮನಿಯಾರ್ ಮಳ್ಳಿ, ಮಲ್ಲಿಕಾರ್ಜುನ ಬಿ ನೆಲೋಗಿ, ಭೀಮರಾಯ ಕಟ್ಟಿ, ಉಸ್ಮಾನ್ ಸಿಪಾಯಿ, ಸಿದ್ದು ಕೇರೂರ, ವಸಂತ ನರಿಬೋಳ. ಸಲೀಂ ಕಣ್ಣಿ, ರಫೀಕ್ ಮಡಕಿ, ಮಹೀಮೋದ್ ನೂರಿ, ಗೌಸ್ ಇನಾಮದಾರ್, ರಹೇಮಾನ್ ಪಟೇಲ್, ಮಲ್ಲಿಕಾರ್ಜುನ ಬಿಲ್ಲಡ್, ಯುನುಸ್ ಹಾರ್ಡವೇರ್, ಶೇಕ್ ಸದ್ದಾಮ್ ಹುಸೇನ್, ಸಮೀರ್, ನಸೀರ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News