ಕಲಬುರಗಿ | ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ

Update: 2025-03-19 21:28 IST
ಕಲಬುರಗಿ | ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ
  • whatsapp icon

ಕಲಬುರಗಿ : ನಗರದ ರಾಜಾಪುರನಲ್ಲಿರುವ ಸರಕಾರಿ ಮಹಾವಿದ್ಯಾಲಯದಲ್ಲಿ, ಗುಲಬರ್ಗಾ ವಿಶ್ವ ವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನ ಕೋಶ ಇವರುಗಳ ಸಂಯುಕ್ತ ಆಶ್ರಯದಲ್ಲಿ 2024 - 25 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವ-ಆರ್ಥಿಕ ಘಟಕ ವಿವಿಯ ಎ ಮತ್ತು ಬಿ ಮತ್ತು ಪಿಜಿ ಘಟಕಗಳ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಸವಿತಾ ತಿವಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಎನ್‍ಎಸ್‍ಎಸ್ ಸ್ವಯಂ ಸೇವಕರು ಸೇವೆಯ ಮಹತ್ವವನ್ನು ತಿಳಿದುಕೊಳ್ಳಬೇಕು. ಸೇವಾ ಮನೋಭಾವವನ್ನು ಬೆಳೆಸಿಕೊಂಡು ಮುಂದೆ ಬರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ವಿಜಯಕುಮಾರ ಸಾಲಿಮನಿ ಮಾತನಾಡಿ, ವಿದ್ಯಾರ್ಥಿಗಳು ಕಷ್ಟಪಟ್ಟು ಓದಿ ವಿದ್ಯಾವಂತರಾಗಿ ಉದ್ಯೋಗ ಪಡೆದುಕೊಂಡು ಯಶಸ್ಸು ಕಾಣಬೇಕು ಎಂದರು. ಅತಿಥಿಗಳಾದ ಡಾ.ದವಲಪ್ಪ ಬಿಹೆಚ್ ಅವರು ವಿದ್ಯಾರ್ಥಿಗಳು ಮತ್ತು ಎನ್‍ಎಸ್‍ಎಸ್ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ರಾಜಕುಮಾರ ಸಲಗರ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ನಾಗಪ್ಪ ಗೋಗಿ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ಬಸಂತ ಸಾಗರ, ಡಾ.ಬಲಭೀಮ ಸಾಂಗ್ಲಿ, ಡಾ.ರವಿ ಬೌದ್ದೆ ಅವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಡಾ.ಶಾಮಲಾ ಸ್ವಾಮಿ ಅವರು ಪ್ರಾರ್ಥಿಸಿ ಎನ್‍ಎಸ್‍ಎಸ್ ಗೀತೆ ಹಾಡಿದರು. ಡಾ.ಬಸಂತ ಸಾಗರ ಸ್ವಾಗತಿಸಿದರು. ಡಾ.ನಾಗಪ್ಪ ಗೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರವಿ ಬೌದ್ದೆ ವಂದಿಸಿದರು.

ಡಾ.ಬಲಭೀಮ ಸಾಂಗ್ಲಿಯವರು ಎನ್‍ಎಸ್‍ಎಸ್ ಪ್ರತಿಜ್ಞಾವಿಧಿಯನ್ನು ಓದಿದರುಮತ್ತು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಶಿಬಿರಾಧಿಕಾರಿಗಳಾದ ಡಾ.ಶ್ರೀಮಂತ ಹೋಳಕರ, ಡಾ.ರೇಖಾ ಅಣ್ಣಿಗೇರಿ, ಡಾ.ಸುರೇಶ ಮಾಳೆ ಗಾಂವ, ಪ್ರೊ.ಮೇರಿ ಮ್ಯಥೋಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News