ಕಲಬುರಗಿ | ಆಳಂದ ತಾಲ್ಲೂಕಿನ ನಿಂಬರ್ಗಾದಲ್ಲಿ 43.6 ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲು

ಕಲಬುರಗಿ : ಜಿಲ್ಲೆಯ ಆಳಂದ ತಾಲ್ಲೂಕಿನ ನಿಂಬರ್ಗಾ ತಾಂಡಾ ಹೋಬಳಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 43.6 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಾಗಲಕೋಟೆ, ಬೀದರ್, ರಾಯಚೂರು, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳ ಹಲವೆಡೆ, ಯಾದಗಿರಿ ಜಿಲ್ಲೆಯ ಕೆಲವು ಸ್ಥಳಗಳು, ಬಳ್ಳಾರಿ ಮತ್ತು ಗದಗ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ರಾಜ್ಯಾದ್ಯಂತ 40 ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ದಾಖಲಾಗಿದೆ.
ಕೆಎಸ್‌ಎನ್‌ಡಿಎಂಸಿ ಹವಾಮಾನ ಮೇಲ್ವಿಚಾರಣಾ ಜಾಲದ ಪ್ರಕಾರ, ಬೀದರ್ ಜಿಲ್ಲೆಯ 16 ಸ್ಥಳಗಳು, ಕಲಬುರಗಿ ಜಿಲ್ಲೆಯ 12 ಸ್ಥಳಗಳು, ವಿಜಯಪುರ ಜಿಲ್ಲೆಯ 10 ಸ್ಥಳಗಳು, ರಾಯಚೂರು ಜಿಲ್ಲೆಯ 9 ಸ್ಥಳಗಳು, ಬಾಗಲಕೋಟೆ ಜಿಲ್ಲೆಯ 8 ಸ್ಥಳಗಳು, ಯಾದಗಿರಿ ಜಿಲ್ಲೆ, ಬೆಳಗಾವಿ ಜಿಲ್ಲೆಯ 4 ಸ್ಥಳಗಳು ಮತ್ತು ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲಿ ತಲಾ 1 ಸ್ಥಳವು ರಾಜ್ಯದಾದ್ಯಂತ 40 ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ತಿಳಿಸಿದೆ.
