ಕಲಬುರಗಿ | ನ್ಯಾಯಾಧೀಶರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಕಲಬುರಗಿ : ಕರ್ನಾಟಕ ಹೈಕೋರ್ಟ್ ನ ನಾಲ್ವರು ನ್ಯಾಯಾಧೀಶರನ್ನು ಬೇರೆ ಹೈಕೋರ್ಟ್ ಗಳಿಗೆ ವರ್ಗಾವಣೆ ಮಾಡಲು ಸುಪ್ರೀಂ ಕೋರ್ಟ್ ಕೋಲಿಜಿಂ ಶಿಫಾರಸ್ಸು ಮಾಡಿರುವುದನ್ನು ಖಂಡಿಸಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಉಚ್ಚ ನ್ಯಾಯಾಲಯ ಘಟಕದ ವತಿಯಿಂದ ಇಲ್ಲಿನ ಹೈಕೋರ್ಟ್ ಪೀಠದ ಆವರಣದಲ್ಲಿ ಬುಧುವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಹೈಕೋರ್ಟ್ನ ನಾಲ್ವರು ನ್ಯಾಯಾಧೀಶರನ್ನು ಬೇರೆ ಹೈಕೋರ್ಟ್ ಗಳಿಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿರುವುದನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ನ್ಯಾಯವಾದಿಗಳಾದ ಶಿವಕುಮಾರ ಮಾಲಿಪಾಟೀಲ, ಶಿವಾನಂದ ಪಾಟೀಲ, ಎಸ್.ಎಸ್.ಹಾಲಳ್ಳಿ, ಆರ್.ಎಸ್.ಸಿದ್ಧಾಪೂರಕರ್, ಶಿವಕುಮಾರ ಕಲ್ಲೂರ, ಹಿರಿಯ ಮಹಿಳಾ ನ್ಯಾಯವಾದಿ ರತ್ನಾ ಶಿವಯೋಗಿಮಠ ಅವರ ನೇತೃತ್ವದಲ್ಲಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ಉಚ್ಚ ನ್ಯಾಯಾಲಯ ಘಟಕದ ಅಧ್ಯಕ್ಷ ಗುಪ್ತಲಿಂಗ ಎಸ್.ಪಾಟೀಲ, ಉಪಾಧ್ಯಕ್ಷ ಅಶೋಕ ಬಿ.ಮುಲಗೆ, ಪ್ರಧಾನ ಕಾರ್ಯದರ್ಶಿ ಸಂತೋಷ ಹೆಚ್.ಪಾಟೀಲ, ಖಜಾಂಚಿ ಶ್ರವಣಕುಮಾರ ಜಿ.ಮಠ, ಜಂಟಿ ಕಾರ್ಯದರ್ಶಿ ಭೀಮರಾಯ ಎಂ.ಎನ್.ಅವರು ಪ್ರತಿಭಟನೆ ನಡೆಸಿದರು