ಕಲಬುರಗಿ | ವಕ್ಫ್ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಕ್ಫ್ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಯೂತ್ ಫೆಡರೇಶನ್ ಆಫ್ ಗುಲಬರ್ಗಾ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದ ಹಫ್ತ್ ಗುಂಬಜ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಗತ್ ವೃತದಲ್ಲಿ ಧರಣಿ ಸತ್ಯಗ್ರಹ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಮತಿಗಳಿಗೆ ಮನವಿ ಸಲ್ಲಿಸಿದರು.
ವಕ್ಫ್ ಅಸ್ತಿಯ ಮೂಲಕ ಕೇಂದ್ರ ಸರಕಾರ ಅಲ್ಪಸಂಖ್ಯಾತ ಮುಸ್ಲಿಮರಿಗೆ ಸೇರಿದ ಸಂಪತ್ತನ್ನು ವಶಕ್ಕೆ ಪಡೆಯುವ ಕುತಂತ್ರ ಮಾಡುತ್ತಿದೆ. ವಕ್ಫ್ ಆಸ್ತಿ ಹೆಸರಲ್ಲಿ ವಿವಾದ ಹುಟ್ಟುಹಾಕುವ ಕೆಲಸ ಸರಕಾರ ಮಾಡುತ್ತಿದೆ ಎಂದು ಆರೋಪಿಸಿ ಈ ಕಾಯ್ದೆಯನ್ನು ವಾಪಸ್ ಪಡೆದು ವಕ್ಫ್ ಆಸ್ತಿ ರಕ್ಷಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸೈಯದ್ ಅಲೀಮ್ ಇಲಾಹಿ, ಮುಹಮ್ಮದ್ ಮೊಹಸಿನ್, ಮೊಹಮ್ಮದ್ ಆಮೇರ್ ಶೇಕ್, ಅಬ್ದುಲ್ ನಸೀರ್, ಸೀರಾಜ್ ಶಹಾನಾ, ಯುಸುಫೊದ್ದೀನ್ ಸರಮಸ್ತ್, ಅಹ್ಮದ್ ಖಾನ್, ಮುಹಮ್ಮದ್ ಇಸ್ಮಾಯಿಲ್, ಮುಹಮ್ಮದ್ ಉಮರ್ ಜುನೈದಿ, ಖಮರ್ ಸೇರಿದಂತೆ ಹಲವರು ಇದ್ದರು.