ಕಲಬುರಗಿ | ಕಲಬುರಗಿ ಬಾರ್ ಅಸೊಸಿಯೇಷನ್ ಅಧ್ಯಕ್ಷರಾಗಿ ಎಸ್.ವಿ.ಪಸಾರ ಆಯ್ಕೆ

ಕಲಬುರಗಿ : ಕಲಬುರಗಿ ಬಾರ್ ಅಸೊಸಿಯೇಷನ್‌ಗೆ 2025-2027ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನ್ಯಾಯವಾದಿ ಎಸ್.ವಿ.ಪಸಾರ ಅವರು ಅಧಿಕ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಐದು ಜನರು ಕಣದಲ್ಲಿದ್ದರು. ಅದರಂತೆ ಅರುಣ ಧತ್ತಿ ವಾಯ್ 72, ಅಶೋಕ ಬಿ.ಮೂಲಗೆ 396, ರಾಜಶೇಖರ ಬಿ.ಆರ್.ಡೋಂಗರಗಾoವ 303, ಎಸ್.ವಿ.ಪಸಾರ 734, ಸೈಯದ್ ಮಸ್ತಾನ 325 ಅವರುಗಳು ಮತ ಪಡೆದರು.
ಗುರುವಾರ ತಡರಾತ್ರಿ ನಡೆದ ಮತ ಏಣಿಕೆಯಲ್ಲಿ ಅಧ್ಯಕ್ಷರಾಗಿ ಎಸ್.ವಿ.ಪಸಾರ ಸೇರಿದಂತೆ ಭೀಮಾಶಂಕರ ಎಲ್.ಪೂಜಾರಿ ಮತ್ತು ಆರತಿ ಎಸ್.ರಾಠೋಡ (ಮಹಿಳಾ 453) ಅವರುಗಳು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೇ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದರಾಮ ಬಸವರಾಜ ವಾಡಿ (443), ಜಂಟಿ ಕಾರ್ಯದರ್ಶಿಯಾಗಿ ಸುಧೀರ ಸಿ.ಗದಗೆ (776) ಮತ್ತು ಖಜಾಂಚಿಯಾಗಿ ಮಂಜುನಾಥ ಗುರುಪಾದಪ್ಪ ಪಾಟೀಲ್ (680) ಆಯ್ಕೆಯಾಗಿದ್ದಾರೆ.
ಒಟ್ಟು ̧3500 ಮತದಾರರಿದ್ದು, ಅದರಲ್ಲಿ ̧1860 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಸೈಯದ್ ಮಸ್ತಾನ ಅವರಿಗೆ ಹ್ಯಾಟ್ರಿಕ್ ಸೋಲಾಗಿದೆ. ಕಳೆದ ಬಾರಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವಿನ ಹತ್ತಿರದಿಂದ ಅವರು ಪರಾಭವಗೊಂಡಿದ್ದರು.
ಚುನಾವಣೆಯಲ್ಲಿ ವಿಜಯಶಾಲಿಯಾದ ಎಲ್ಲ ಅಭ್ಯರ್ಥಿಗಳಿಗೆ ಯುವ ನ್ಯಾಯವಾದಿ ಜಗನ್ನಾಥ್ ಮಾಲಿ ಪಾಟೀಲ್, ಮಲ್ಲಿಕಾರ್ಜುನ್ ಬಿಲಗುಂದಿ, ಅನೇಕ ಹಿರಿಯ ಮತ್ತು ಕಿರಿಯ ವಕೀಲರು ಅಭಿನಂದಿಸಿದ್ದಾರೆ.