ಕಲಬುರಗಿ | ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಅನಿವಾರ್ಯ : ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ

ಕಲಬುರಗಿ : ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಅನಿವಾರ್ಯವಾಗಿದೆ. ಹಾಗಾಗಿ ನಾವೆಲ್ಲ ಅಪ್ಡೇಟ್ ಆಗ್ಬೇಕು ಎಂದು ಖಾಜಾ ಬಂದಾನವಾಜ ವಿಶ್ವ ವಿದ್ಯಾಲಯದ ಕುಲಾಧಿಪತಿ ಜನಾಬ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಹೇಳಿದರು.
ಶನಿವಾರ ಸೈಯದ್ ಅಕ್ಬರ್ ಹುಸೈನಿ ಶಾಲೆಯ 32ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಹೊಸ ತಂತ್ರಜ್ಞಾನದ ಲ್ಯಬ್ ಗಳು ವಿದ್ಯಾರ್ಥಿಗಳಿಗೆ ನೂತನ ಜ್ಞಾನ ಒದಗಿಸುತ್ತವೆ. ನಾವು ಶಾಲೆಯಲ್ಲಿ ಎಲ್ಲ ವಿನೂತನ ತಂತ್ರಜ್ಞಾನದ ಅಳವಡಿಕೆಯಲ್ಲಿ ಮುಂದಾಗಿದ್ದೆವೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬೇಕು ಎಂದರು.
ವಾರ್ಷಿಕೋತ್ಸವದ ಕಾರ್ಯಕ್ರಮಗಳು ವಿದ್ಯಾರ್ಥಿಗಳ, ಶಿಕ್ಷಕರ ಅಲ್ಲದೇ ಒಂದು ಶಾಲೆಯ ಕಾರ್ಯನಿರ್ವಹಣೆಯನ್ನು ನೋಡಲು ಅವಕಾಶ. ವಿದ್ಯಾರ್ಥಿಗಳ ಉತ್ಸಾಹ ಮತ್ತು ಅವರ ಭಾಗಿದರಿಕೆ ನೋಡಿ ಮೆಚ್ಚಿದೆ. ಬಹುಮಾನ ಗೆದ್ದ ಎಲ್ಲರಿಗೂ ಅಭಿನಂದನೆಗಳು. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಆಯೇಷಾ ಮುಹಮ್ಮದಿ - ವರ್ಷದ ವಿದ್ಯಾರ್ಥಿ ಪ್ರಶಸ್ತಿ ಮತ್ತು ಎಮರ್ಲ್ಡ್ ಹೌಸ್ ಗೆ ಸಾಂಸ್ಕೃತಿಕ ಚಟುವಟಿಕೆಗಳ ಚಾಂಪಿಯನ್ ಆಗಿ ಬಹುಮಾನ ಪಡೆದರು.
ಹುಸ್ನಾ ಫಾತಿಮಾ ಮತ್ತು ಹಜೈಫಾ ಖಮಾರ್ ಪ್ರಾರ್ಥಿಸಿದರೆ, ಮೊಹಮ್ಮದ್ ಫರ್ಹಾನ್ ಡ್ಯಾನಿಶ್ ಮತ್ತು ಹಮಾಜ್ ಖಮರ ನಿರೂಪಿಸಿದರು. ಶಾಲೆಯ ಪ್ರಾಂಶುಪಾಲ ಥೋಮಸ ಎಸ್ ಜೇಮ್ಸ ವಾರ್ಷಿಕ ವರದಿ ಓದಿದರು. ವಿದ್ಯಾರ್ಥಿನಿ ಆಯಿಷಾ ಸಿದ್ದಿಕ್ ವಂದಿಸಿದರು.
ಕಾರ್ಯಕ್ರಮದಲ್ಲಿ ಬಹುಮನ ವಿತರಣೆ ನಡೆಯಿತು. ಸಂಸ್ಕೃತ್ರಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯ ಎಲ್ಲ ಶಿಕ್ಷಕ ಮತ್ತು ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪಾಲಕರು ಹಾಜರಿದ್ದರು.