ಕಲಬುರಗಿ | ಸಾರಿಗೆ ನೌಕರರಿಂದ ಸಚಿವ ರಾಮಲಿಂಗಾರೆಡ್ಡಿಗೆ ಮನವಿ

Update: 2025-04-23 22:14 IST
ಕಲಬುರಗಿ | ಸಾರಿಗೆ ನೌಕರರಿಂದ ಸಚಿವ ರಾಮಲಿಂಗಾರೆಡ್ಡಿಗೆ ಮನವಿ
  • whatsapp icon

ಕಲಬುರಗಿ : ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬುಧವಾರ ನಗರಕ್ಕೆ ಆಗಮಿಸಿದ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾ ಮಂಡಳಿ ಕಲ್ಯಾಣ ಕರ್ನಾಟಕ ನಿಗಮ ಸದಸ್ಯರ ವತಿಯಿಂದ ಮನವಿ ಸಲ್ಲಿಸಲಾಯಿತು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನೌಕರರ 38 ತಿಂಗಳ ಹಿಂಬಾಕಿ ವೇತನ ಪಾವತಿ, ಶೇ.25ರಷ್ಟು ಭಾಗ ವೇತನ ಹೆಚ್ಚಳ ಕೂಡಲೇ ಪಾವತಿಸಲು ವೇತನ ಪರೀಷ್ಕರಣೆ ಕೈಗೊಳ್ಳಬೇಕು, 2,500 ನಿರ್ವಾಹಕರು, 2,000 ಚಾಲಕರು, 1,500 ತಾಂತ್ರಿಕ ಸಿಬ್ಬಂದಿಗಳ ಹಾಗೂ ಇನ್ನೂಳಿದ ಸಿಬ್ಬಂದಿಗಳ ಭರ್ತಿಗೆ ಅನುಮತಿ ದೊರಕಿಸಿ ಕೊಡಬೇಕು, ಸಂವಿಧಾನ 371 (ಜೆ) ಅಡಿ ನೇಮಕಾತಿಗೆ ಅರ್ಹ ಇರುವ ಹುದ್ದೆಗಳ ತಕ್ಷಣ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಭೀಮರಾವ ಯರಗೋಳ, ಕಾರ್ಯಾಧ್ಯಕ್ಷ ಸಂಗಮನಾಥ ರಬಶೆಟ್ಟಿ, ಮುಖ್ಯ ಉಪಾಧ್ಯಕ್ಷ ರಾಮಚಂದ್ರ ಹೈಯ್ಯಾಳಕರ, ಜಂಟಿ ಕಾರ್ಯದರ್ಶಿ ಚಂದ್ರಕಾಂತ ಡೊಳ್ಳಿ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News