ಕಲಬುರಗಿ | ದಮನಿತರ ಧ್ವನಿಯಾದವರು ವಿನೋದ ಕುಮಾರ ಶುಕ್ಲ : ರಿಯಾಝ್ ಅಹಮದ್ ಬೋಡೆ

ಕಲಬುರಗಿ : ಅಸಹಾಯಕರು, ದೀನ ದಲಿತರು, ಯಾರಿಗೆ ದನಿ ಇಲ್ಲವೋ ಅಂತವರ ಧ್ವನಿಯಾಗಿ ಸಾಹಿತ್ಯ ರಚನೆ ಮಾಡಿ ಅವರದ್ದೇ ಆದ ಒಂದು ವಿಶಿಷ್ಟ ಚಾಪು ಮೂಡಿಸಿದ ಪರಿಣಾಮ ಹಿಂದಿ ಸಾಹಿತಿಯಾದ ವಿನೋದ ಕುಮಾರ್ ಶುಕ್ಲ ಅವರು ಜ್ಞಾನಪೀಠದಂತಹ ಪ್ರತಿಷ್ಟಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಚಿಂತಕರಾದ ರಿಯಾಝ್ ಅಹಮದ್ ಬೋಡೆ ಅವರು ಅಭಿಪ್ರಾಯಪಟ್ಟರು.
ನಗರದ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಡಾ.ಅಂಬೇಡ್ಕರ್ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ಹಿಂದಿ ವಿಭಾಗವು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಸಕ್ತ ವರ್ಷದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ವಿನೋದಕುಮಾರ್ ಶುಕ್ಲ ಅವರ ಸಾಹಿತ್ಯದ ವಿಶಿಷ್ಟತೆಯನ್ನು ಕುರಿತು ರಿಯಾಝ್ ಅಹಮದ್ ಬೋಡೆ ಅವರು ವಿಶ್ಲೇಷಣೆ ಮಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ಹಿಂದಿ ವಿಭಾಗವು ಆಯೋಜಿಸಿದ್ದು, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಕನ್ನಡ ವಿಭಾಗದ ಪ್ರಾಧ್ತಾಪಕರಾದ ಡಾ.ಅರುಣ್ ಜೋಳದಕೂಡ್ಲಿಗಿ ಅವರು ರಿಯಾಝ್ ಅಹಮದ್ ಬೋಡೆ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಿ.ವಿಜಯಕುಮಾರ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ನಿರ್ಮಲಾ ಸಿರಗಾಪುರ, ಹಿಂದಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಸುರೇಶ ಕುಲಕರ್ಣಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ಸಿದ್ದಪ್ಪ ಎಸ್.ಕಾಂತ, ಡಾ.ಸುದರ್ಶನ ಮದನಕರ್, ಡಾ.ವಸಂತ ವಿ. ನಾಸಿ, ಡಾ.ಸಿದ್ದಾರ್ಥ ಮದನಕರ್, ಡಾ.ಕರಿಬಸಪ್ಪ, ಡಾ.ದತ್ತುರಾಯ ಮೊದಲಾದವರು ಉಪಸ್ಥಿತರಿದ್ದರು.