ಕಲಬುರಗಿ | ಕೋಲಿ ಕಬ್ಬಲಿಗ ಸಮುದಾಯದ ಧೀಮಂತ ನಾಯಕ ವಿಠಲ್ ಹೇರೂರ : ಧರ್ಮರಾಯ ಜವಳಿ

Update: 2025-04-10 11:59 IST
ಕಲಬುರಗಿ | ಕೋಲಿ ಕಬ್ಬಲಿಗ ಸಮುದಾಯದ ಧೀಮಂತ ನಾಯಕ ವಿಠಲ್ ಹೇರೂರ : ಧರ್ಮರಾಯ ಜವಳಿ
  • whatsapp icon

ಕಲಬುರಗಿ : ನಗರದ ಶ್ರೀ ಮಾತಾ ಮಾಣಿಕೇಶ್ವರಿ ವಧು ವರರ ಮಾಹಿತಿ ಕೇಂದ್ರ ಮತ್ತು ಶ್ರೀ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಪತ್ತಿನ ಸಹಕಾರ ಸಂಘದ ವತಿಯಿಂದ ವಿಠಲ ಹೇರೂರ ಅವರ 72 ನೇ ವರ್ಷದ ಹುಟ್ಟು ಹಬ್ಬದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಪನ್ಯಾಸಕರು ಹಾಗೂ ಕಲಬುರಗಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾದ ಧರ್ಮರಾಯ ಜವಳಿ ಮಾತನಾಡಿ, ಕೋಲಿ ಕಬ್ಬಲಿಗ ಸಮುದಾಯದ ಧೀಮಂತ ನಾಯಕ ವಿಠಲ್ ಹೇರೂರ ಅವರು ತಮ್ಮ ಬದುಕಿನ ಉದ್ದಕ್ಕೂ ಸ್ವಾಭಿಮಾನದ ಜೀವನ ಕಟ್ಟಿಕೊಂಡು ಒಬ್ಬ ಬಂಡಾಯ ಬರಹಗಾರರಾಗಿದ್ದು, ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದವರು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಾಬು ಪಿ.ತಡಕಲ್ ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಹಿರಿಯರಾದ ಅಶೋಕ ಚಾಂದಕವಠೆ, ಶಿವಾಜಿ ತಳವಾರ, ಸೈಬಣ್ಣ ವಡಗೇರಿ, ಪ್ರಕಾಶ್ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News