ಕಲಬುರಗಿ | ಸಂವಿಧಾನವನ್ನು ಅರಿತು ಜಾಗೃತರಾಗಬೇಕು : ಡಾ.ಕರಿಗೂಳೇಶ್ವರ ಫರತಾಬಾದ

ಕಲಬುರಗಿ : ಸಂವಿಧಾನವನ್ನು ಅರಿಯುವುದರ ಮುಖಾಂತರ ಜಾಗೃತರಾಗಬೇಕು ಎಂದು ಮಹಾಗಾಂವ್ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಕರಿಗೂಳೇಶ್ವರ ಫರತಾಬಾದ ಅಭಿಮತಪಟ್ಟರು.
ಜೇವರ್ಗಿ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಸರಕಾರಿ ಕ್ಷೇತ್ರಗಳನ್ನು ನಿಧಾನವಾಗಿ ಖಾಸಗಿಕರಣ ಮಾಡಲಾಗುತ್ತಿದೆ. ಇದರಿಂದ ಮೀಸಲಾತಿ ಅವನತಿಯಾಗುತ್ತದೆ. ಸಂವಿಧಾನವನ್ನು ಬದಲಿಸದೆ ಈ ಮನುವಾದಿಗಳು ಸಂವಿಧಾನದ ಶಕ್ತಿಯನ್ನು ಕುಗ್ಗಿಸುತ್ತಿದ್ದಾರೆ. ಈ ದೇಶದಲ್ಲಿ ರಕ್ತ ಹರಿಸದೆ ಕ್ರಾಂತಿಯನ್ನ ಮಾಡಬಹುದು, ಅದು ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಓಟಿನ ಶಕ್ತಿಯ ಮುಖಾಂತರ. ಪ್ರಸ್ತುತ ತಮ್ಮ ಅಮೂಲ್ಯವಾದ ಮತವನ್ನು ಹಣ ಹಾಗೂ ಹೆಂಡಕ್ಕೆ ಮಾರಿಕೊಳ್ಳುತ್ತಿದ್ದಾರೆ. ಮತವನ್ನು ಮಾರಿಕೊಳ್ಳುವ ಜನರಿಗಿಂತ ದೊಡ್ಡ ಬಿಕ್ಷುಕರು ಮತ್ಯಾರಿಲ್ಲ. ನಮ್ಮ ಮುಂದಿನ ಬದುಕು ಉತ್ತಮವಾಗಿರಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಿದ್ಧಾಂತದಲ್ಲಿ ನಡೆಯುವ ಜನರಿಗೆ ಮತ ಚಲಾಯಿಸಬೇಕು. ಸಂವಿಧಾನವನ್ನು ಅರಿಯುವುದರ ಮುಖಾಂತರ ನಾವುಗಳು ಜಾಗೃತಾಗಬೇಕೆಂದರು.
ಚಿಗರಳ್ಳಿಯ ಮರುಳ ಶಂಕರ ಮಠದ ಶ್ರೀ ಸಿದ್ದಕಬೀರ ಶರಣರು ಮಾತನಾಡಿ, ದೇಶವು ಮೌಢ್ಯತೆಯಿಂದ ಹೊರಬರಬೇಕು. ಯುವಕರು ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯುವುದರ ಮುಖಾಂತರ ಅವರಿಗೆ ಗೌರವ ನೀಡಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಸುರೇಶ್ ಹಾದಿಮನಿ, ಚಂದ್ರಶೇಖರ್ ಹರನಾಳ, ಸುಭಾಷ್ ಚೆನ್ನೂರು, ಭೀಮರಾಯ ನಗನೂರ್, ಮಲ್ಲಣ್ಣ ಕೋಡಚಿ, ಮಲ್ಲಮ್ಮ ಕೊಬ್ಬಿನ, ಶಾಂತಪ್ಪ ಯಲಗೋಡ, ಸಿದ್ದಪ್ಪ ಆಲೂರ, ದೇವೇಂದ್ರ ವರ್ಮ, ಶ್ರೀಹರಿ ಕರ್ಕಳ್ಳಿ, ಸಿದ್ದು ಕೆರೂರ್, ಗುರುಲಿಂಗಪ್ಪಗೌಡ ಪೊಲೀಸ್ ಪಾಟೀಲ್, ಶರಣಗೌಡ ಮಾಲಿ ಪಾಟೀಲ್, ಹಣಮಂತ ಎಳಸಂಗಿ ದೇವಿಂದ್ರ ಸಾಹು ದಂಡಿನ್, ಬಸವರಾಜ ಹೇರೂರು, ಭೀಮಣ್ಣ ವಸ್ತಾರಿ, ಮರಪ್ಪ ಜೈನಾಪುರ್, ಸಿದ್ದರಾಮ ಕಟ್ಟಿ, ಭಾಗಣ್ಣ ಕಟ್ಟಿ, ವಿಶ್ವರಾಧ್ಯ ಮಾಯೆ, ವಿಜಯ್ ಕುಮಾರ್ ದಣಿ, ಗುರುಲಿಂಗಪ್ಪಗೌಡ ಗುಡೂರ್, ರಾಜು ಹಾಲ್ಗಡ್ಲಾ, ಬಾಲಣ್ಣ ಕೊಬ್ಬಿನ, ಭೀಮು ಖಾದ್ಯಪುರ್, ಗುಂಡಪ್ಪ ಜಡಗಿ, ಬಸವರಾಜ್ ಮುಡುಬುಳ, ಶರಣಪ್ಪ ಹೊಸಮನಿ, ಸಿದ್ದು ಜನಿವಾರ, ಸೈದಪ್ಪ ಈಜೇರಿ, ದೇವೇಂದ್ರ ಬಡಿಗೇರ್, ಪರಶುರಾಮ್ ನಡೆವಿನಕೆರೆ, ಸರೋಜಾ ಕಾಂಬಳೆ ಉಪಸ್ಥಿತರಿದ್ದರು. ಶಿವಶರಣಪ್ಪ ಹೊಸ್ಮನಿ ಸ್ವಾಗತಿಸಿದರು. ಶ್ರೀಮಂತ್ ಬಂಗಾರಹಟ್ಟಿ ವಂದಿಸಿದರು. ಪ್ರಕಾಶ್ ಕಾಂಬಳೆ ನಿರೂಪಿಸಿದರು.