ಕಲಬುರಗಿ | ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ : ವಿಪರೀತವಾಗಿ ಸಿ.ಎನ್.ಜಿ, ಎಲ್.ಪಿ.ಜಿ ಗ್ಯಾಸ್ ಬೆಲೆ ಏರಿಕೆ ಖಂಡಿಸಿ, ರಸ್ತೆಯಲ್ಲಿ ಖಾಲಿ ಗ್ಯಾಸ್ ಸಿಲೆಂಡರ್ ಇಟ್ಟು, ಒಲೆಯ ಮೇಲೆ ಅಡುಗೆ ಮಾಡಿ ಕೇಂದ್ರ ಸರಕಾರ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಶಕೀಲ್ ಸರಡಗಿ ಅವರ ನೇತೃತ್ವದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯ ಮೇಲೆ ಪಕ್ಷದ ಕಾರ್ಯಕರ್ತರು ಒಲೆಯ ಮೇಲೆ ಚಹಾ, ರೊಟ್ಟಿ ಹಾಗೂ ಅನ್ನ ಕುದಿಸುವ ಮೂಲಕ ಕೇಂದ್ರ ಸರಕಾರ ವಿರುದ್ಧ ಘೋಷಣೆ ಕೂಗಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹೊನಗುಂಟಿ, ಈರಣ್ಣಾ ಪಾಟೀಲ್, ಗಣೇಶ್ ನಾಗನಹಳ್ಳಿ, ಸಂಕ್ಪಾಲ್ ಕಾಮ್ಲೆ, ಮೊಹಮ್ಮದ್ ಅಸ್ವಾನ್, ಸೈಯದ್ ರಖೀಬ್, ಅಜರ್ ಬಾದಲ್, ರಾಜು ಮಡಗಿ, ಈಜೀಜ್ ನಿಂಬಾಳ್ಕರ್, ಟೈಗರ್ ವಿನೀಶ್, ಮಿಸ್ತ್ರಿ ಶರ್ಫುದ್ದೀನ್, ಪ್ರಶಾಂತ್ ನಾಟೇಕರ್, ಅಸ್ಲಂ ಸಿಂದಗಿ, ಸಮ್ರೀನ್, ಗೀತಾ, ಸಂಗೀತಾ ಸೇರಿದಂತೆ ಹಲವರು ಹಾಜರಿದ್ದರು.
