ಕಲಬುರಗಿ | ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಕಲಬುರಗಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ದಾಳಿ ಮಾಡಿದನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಕೀಲ್ ಅಹ್ಮದ್ ಸರಡಗಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಹಲ್ಗಾಮ್‌ನಲ್ಲಿ ದಾಳಿ ಮಾಡಿರುವ ಭಯೋತ್ಪಾದಕರ ಕೂಡಲೇ ಬಂಧಿಸಬೇಕು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಪ್ರತಿಕೃತಿ ದಹಿಸಿ ಅಮಿತ್ ಷಾ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಮಾಜಿ ಅಧ್ಯಕ್ಷ ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ಕಾರ್ತಿಕ ನಾಟಿಕರ್, ಪರಶುರಾಮ್ ನಾಟಿಕಾರ್, ಉಮೇರ್ ಜುನೈಧಿ, ಮೊಹಮ್ಮದ್ ಅಸ್ವಾನ, ರಾಮ್ ಪ್ರಸಾದ್ ಕಾಂಬಳೆ, ಸಂಘಪಾಲ್ ಕಾಂಬಳೆ, ರಾಜು ಮಾಳಿಗೆ, ಏಜಾಜ್ ನಿಂಬಾಳ್ಕರ್, ದೇವಿಂದ್ರ ಯಾಬಾಳ್, ಅಸ್ಲಾಂ ಸಿಂದಗಿ, ಅಮೈರ್ ಮಚೆರ್ಂಟ್, ಕಿರಣ್ ಚಹ್ಹಾಣ, ನಿಖಿಲ್ ನಾಗತಿಲಕ್ ಹಿರಾಪುರ್, ಶೇಖ್ ಅಸೀಫ್ ಅಲಿ, ಶೇಖ ಸಮರೀನ್, ಗೀತಾ ಮುದ್ದಗಲ್, ಹರೂನ್ ಖುರೇಷಿ, ಭೀಮಾಶಂಕರ್ ಕೊರಳ್ಳಿ, ಅಬ್ದುಲ್ ಸತ್ತಾರ್ ನದೇಪಲ್ಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.