ಆಳಂದ | ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿ ಆಹ್ವಾನ

ಕಲಬುರಗಿ : ಆಳಂದ ಪುರಸಭೆ ಕೆಂದ್ರ ಪುರಸ್ಕ ತ ಅಮೃತ್-2.0 ಅಭಿಯಾನದ “ಅಮೃತ ಮಿತ್ರ” ಕಾರ್ಯಕ್ರಮದ ತಾಂತ್ರಿಕೇತರ ಚಟುವಟಿಕೆಗಳಡಿ ಪುರಸಭೆ ಕಾರ್ಯಾಲಯ ವ್ಯಾಪ್ತಿಯಲ್ಲಿ ಬರುವ ನೀರಿನ ಬಳಕೆದಾರರ ಶುಲ್ಕ ಮತ್ತು ಆಸ್ತಿ ತೆರಿಗೆ ಸಂಗ್ರಹಿಸುವುದನ್ನು ನಿರ್ವಹಣೆ ಮಾಡಲು ಡೇ-ನಲ್ಮ್ ಅಭಿಯಾನದಡಿ ನೋಂದಾಯಿತ ಅರ್ಹ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಳಂದ ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಆಳಂದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಾಗೂ ಡೇ-ನಲ್ಮ್ ಯೋಜನೆಯಡಿ ನೋಂದಾಯಿತ ಆಸಕ್ತ ಮಹಿಳಾ ಸ್ವ-ಸಹಾಯ ಗುಂಪುಗಳು ನೀರಿನ ಬಳಕೆದಾರರ ಶುಲ್ಕ ಮತ್ತು ಆಸ್ತಿ ತೆರಿಗೆ ಸಂಗ್ರಹಿಸುವುದನ್ನು ನಿರ್ವಹಣೆ ಮಾಡಲು ಆಳಂದ ಪುರಸಭೆ ಕಾರ್ಯಾಲಯದಿಂದ ಅರ್ಜಿ ನಮೂನೆಯನ್ನು ಪಡೆದು 2025ರ ಮಾ.26ರ ಸಂಜೆ 5 ಗಂಟೆಯೊಳಗಾಗಿ ಅರ್ಹ ಮತ್ತು ಆಸಕ್ತ ಮಹಿಳಾ ಸ್ವ-ಸಹಾಯ ತಾವು ಕೈಗೊಳ್ಳುವ ಚಟುವಟಿಕೆಯ ಪ್ರಸ್ತಾವನೆಯನ್ನು ಮುಚ್ಚಿದ ಲಕೋಟೆಯಲ್ಲಿ ಆಳಂದ ಪುರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಆಳಂದ ಪುರಸಭೆ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.