ಕಲಬುರಗಿ: ಸಿಡಿಲು ಬಡಿದು ಎತ್ತು ಸಾವು
Update: 2025-04-27 19:53 IST

ಕಲಬುರಗಿ: ಆಳಂದ ತಾಲೂಕಿನ ಸರಸಂಬಾ ಗ್ರಾಮದ ರೈತ ಶಿವರಾಯ ಬುಕ್ಕಾ ಅವರ ಒಂದು ಎತ್ತು ಸಂಜೆ ಶುಕ್ರವಾರ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಸುಮಾರು 80,000 ರೂಪಾಯಿ ಬೆಲೆಯ ಈ ಎತ್ತಿನ ಸಾವಿನಿಂದ ರೈತನಿಗೆ ಆರ್ಥಿಕ ಹೊಡೆತವಾಗಿದೆ.
ಈ ಘಟನೆಯ ಬಗ್ಗೆ ಸರಸಂಬಾ ವಲಯದ ಪಶುವೈದ್ಯ ಮಹಾಂತೇಶ್ ಪಾಟೀಲ್ ಭೇಟಿ ನೀಡಿ, ಪ್ರಾಥಮಿಕ ವರದಿಯನ್ನು ಸಂಬoಧಿತ ಇಲಾಖೆಗೆ ಸಲ್ಲಿಸಿದ್ದಾರೆ. ಜೊತೆಗೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ, ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.