ಹೆಸರು ಕಾಳು ಖರೀದಿಗೆ ನೋಂದಣಿ | ನ.18ರವರೆಗೆ ಅವಧಿ ವಿಸ್ತರಣೆ : ಬಿ.ಫೌಜಿಯಾ ತರನ್ನುಮ್
ಕಲಬುರಗಿ : ಪ್ರಸಕ್ತ 2024-25ನೇ ಸಾಲಿನ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಹೆಸರು ಕಾಳು ಖರೀದಿಗೆ ರೈತರು ಹೆಸರು ನೊಂದಾಯಿಸಲು ಸರಕಾರ ನವೆಂಬರ್ 18ರವರೆಗೆ ದಿನಾಂಕ ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ರಾಜ್ಯಕ್ಕೆ 22,215 ಮೆಟ್ರಿಕ್ ಟನ್ ರಿಂದ 38,320 ಮೆಟ್ರಿಕ್ ಟನ್ ಹೆಚ್ಚಿಸಿ ಹೆಸರು ಕಾಳು ಖರೀದಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದರಿಂದ ಇದೇ ನವೆಂಬರ್ 7 ರಿಂದ 18ರವರೆಗೆ ರೈತರು ನೋಂದಣಿ ಮಾಡಿಕೊಳ್ಳಲು ವಿಸ್ತರಿಸಿದಲ್ಲದೆ ನೊಂದಣಿ ಜೊತೆಗೆ ಈಗಾಗಲೇ ಜಿಲ್ಲೆಯಾದ್ಯಂತ ತೆರೆಯಲಾದ ಖರೀದಿ ಕೇಂದ್ರದಲ್ಲಿ ರೈತರಿಂದ ಹೆಸರು ಕಾಳು ಸಹ ಖರೀದಿಸಲಾಗುತ್ತದೆ ಎಂದಿದ್ದಾರೆ.
ಸೋಯಾಬೀನ್ ಖರೀದಿಗೂ ಕಾಲಾವಧಿ ವಿಸ್ತರಣೆ :
ಅದೇ ರೀತಿ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬೀನ್ ಖರೀದಿಸಲು ನಿಗದಿಪಡಿಸಿರುವ ನೋಂದಣಿ ಕಾಲಾವಧಿಯನ್ನು ಸಹ ಅಕ್ಟೋಬರ್ 20 ರಿಂದ ನವೆಂಬರ್ 20ರವರೆಗೆ ವಿಸ್ತರಿಸಿದೆ. ನೊಂದಣಿ ಜೊತೆಗೆ ಖರೀದಿ ಪ್ರಕ್ರಿಯೆ ಸಹ ನಡೆಯಲಿದ್ದು, ಜಿಲ್ಲೆಯ ರೈತರು ಇದರ ಲಾಭ ಪಡೆಯುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.