ಬಿಜೆಪಿಯಲ್ಲಿನ ವೈಯಕ್ತಿಕ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲ್ಲ: ಜಗದೀಶ್ ಶೆಟ್ಟರ್
![ಬಿಜೆಪಿಯಲ್ಲಿನ ವೈಯಕ್ತಿಕ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಲ್ಲ: ಜಗದೀಶ್ ಶೆಟ್ಟರ್ Photo of Jagdish Shetter](https://www.varthabharati.in/h-upload/2025/01/28/1500x900_1318510-untitled-51.webp)
ಜಗದೀಶ್ ಶೆಟ್ಟರ್
ಕಲಬುರಗಿ : ಬಿಜೆಪಿಯಲ್ಲಿ ಕೆಲವರು ವೈಯಕ್ತಿಕ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅವರ ಹೇಳಿಕೆಗಳ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ವರಿಷ್ಠರಿಗೆ ಗಮನವಿದೆ ಮತ್ತು ಶೀಘ್ರದಲ್ಲೇ ಬಿಜೆಪಿ ಗೊಂದಲಕ್ಕೆ ತೆರೆ ಎಳೆಯುತ್ತಾರೆ' ಎಂದಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳದ ಸಂದರ್ಭದಲ್ಲಿ ಬಿಜೆಪಿ ನಾಯಕರ ಗಂಗಾ ಸ್ನಾನ ಕುರಿತು ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಅದು ಖರ್ಗೆಯವರ ಮನಸ್ಥಿತಿ ಆಚಾರ-ಸಂಸ್ಕೃತಿ ತೋರಿಸುತ್ತದೆ, ಖರ್ಗೆಯವರ ಹೇಳಿಕೆ ಹಿಂದೂ ಧರ್ಮಕ್ಕೆ ಅಪಮಾನ, ಮುಸ್ಲಿಮರು ಮೆಕ್ಕಾ ಹೋಗುತ್ತಾರೆ, ಕ್ರಿಶ್ಚಿಯನರು ಇಟಲಿಗೆ ಹೋಗಿ ಪೋಪ್ ಭೇಟಿ ಮಾಡುತ್ತಾರೆ. ಇದನ್ನೇ ಖರ್ಗೆಯವರು ಏಕೆ ಪ್ರಶ್ನೆ ಮಾಡೋಲ್ಲ? ಒಂದು ವೇಳೆ ಅವರು ಪ್ರಶ್ನೆ ಮಾಡಿದರೆ ಅವರ ಅಸ್ತಿತ್ವವೇ ಉಳಿಯೋದಿಲ್ಲ ಎಂದು ಕಿಡಿಕಾರಿದ್ದಾರೆ.