ವಿದ್ಯಾರ್ಥಿಗಳು ಕಲಬುರಗಿ ಜಿಲ್ಲೆಯನ್ನು ಧನಾತ್ಮಕ ಬಿಹಾರವನ್ನಾಗಿ ಮಾಡಿ : ಬಾಬುರಾವ್ ಯಡ್ರಾಮಿ
ಕಲಬುರಗಿ : ಕಲಬುರಗಿ ಜಿಲ್ಲೆಯನ್ನು ಬಿಹಾರ ಮಾಡುವಂತೆ ವಿದ್ಯಾರ್ಥಿನಿಯರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಕರೆ ನೀಡಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ನೇತೃತ್ವದಲ್ಲಿ ನಡೆದ ಪತ್ರಿಕೋದ್ಯಮ ವಿಷಯದ ಮೌಲ್ಯವರ್ಧಿತ ಕೋರ್ಸ್ ನ ಮಿನಿ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಬಿಹಾರ ರಾಜ್ಯ ಹಲವಾರು ವಿಷಯಗಳಲ್ಲಿ ದಾಖಲೆ ಮಾಡಿದೆ, ನಾವು ಋಣಾತ್ಮಕ ಬಿಹಾರ ಗಮನಿಸದೆ ಧನಾತ್ಮಕ ಬಿಹಾರ ರಾಜ್ಯದ ಚಿಂತನೆ ಮಾಡುವುದು ಅಗತ್ಯವಾಗಿದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ದೇಶದ ನಾಗರಿಕ ಸೇವೆಗಳಿಗೆ ಹೆಚ್ಚು ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತದೆ. ಐಎಎಸ್ ಅಧಿಕಾರಿ ಹುದ್ದೆಗೆ ಹೆಚ್ಚು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು UPSC ಪ್ರತಿ ವರ್ಷ ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಯಲ್ಲಿ ಬಿಹಾರ ರಾಜ್ಯದಿಂದಲೆ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗುವುದರ ಮೂಲಕ ದೇಶದಲ್ಲಿ ಹೆಸರು ಪಡೆದ ರಾಜ್ಯವಾಗಿದೆ. ಅದೇ ರೀತಿ ಬಿಹಾರದ ಸ್ಪರ್ಧಾತ್ಮಕ ವಿದ್ಯಾರ್ಥಿಗಳಂತೆ ನಮ್ಮ ಕಲಬುರಗಿ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಸಾಗಬೇಕೆಂದು ಎಂದರು.
ಈ ಮಹಾವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿನಿಯರು ದೇಶ ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ಈಗ ನಾಗರೀಕ ಸೇವಾ ಪರೀಕ್ಷೆಗಳ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಪದವಿಯ ಜೊತೆಗೆ ಇಂತಹ ಮೌಲ್ಯ ವರ್ಧಿತ ಕೋರ್ಸ್ ಗಳು ಉದ್ಯೋಗ ನೀಡಲು ಅನುಕೂಲವಾಗುತ್ತವೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೌಶಲ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ವಿದ್ಯಾರ್ಥಿಗಳು ಹೊಸ ಹೊಸ ಕೌಶಲ್ಯ ಬೆಳೆಸಿಕೊಳ್ಳಲು ಇಂತಹ ಕೋರ್ಸ್ ಗಳಿಂದ ಸಾದ್ಯ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ರಾಮಲಿಂಗ ಬೋಸ್ಲೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಕಾಲೇಜಿನ ಸಂಚಾಲಕರಾದ ನಾಗಣ್ಣ ಘಂಟಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ, ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ.ಮೋಹನ್ ರಾಜ್ ಪತ್ತಾರ, ಡಾ ವೈ ಎನ್ ರವಿಂದ್ರ, , ಡಾ ಜ್ಯೋತಿಪ್ರಕಾಶ್ ದೇಶಮುಖ್, ಡಾ.ಮಹೇಶ್ ಗಂವಾರ, ಡಾ.ಸುಭಾಷ್ ದೊಡಮನಿ, ಡಾ.ಸವಿತಾ ಬೋಳಶೆಟ್ಟಿ, ಶಿವಲೀಲಾ ದೋತ್ರೇ, ದಾನಮ್ಮ ಕೋರವಾರ ಉಪಸ್ಥಿತರಿದ್ದರು.
ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮಚಂದ್ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಕವಿತಾ ಠಾಕೂರ್ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ಕುಲಕರ್ಣಿ ವಂದಿಸಿದರು.