ಕಲಬುರಗಿ, ಯಾದಗಿರಿ ಜಿಲ್ಲೆಗಳಿಂದ ಹಜ್‌ಗೆ ತೆರಳುವ ಯಾತ್ರಾರ್ಥಿಗಳಿಗೆ ಲಸಿಕೆ
Update: 2025-04-16 20:57 IST

ಕಲಬುರಗಿ : ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಿಂದ ಹಜ್‌ಗೆ ತೆರಳುವ 513 ಯಾತ್ರಾರ್ಥಿಗಳಿಗೆ ಕಲಬುರಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಖಾನಾಪುರ ವ್ಯಾಪ್ತಿಗೊಳಪಡುವ ಮಜ್ಲಿಸ್ ರಹಬರ್-ಎ-ಹುಜ್ಜಾಜ್ ಹಜ್ ಕಮಿಟಿಯಿಂದ ("HAJ PILGRIMS -2025) ಲಸಿಕಾ ಶಿಬಿರವನ್ನು ಬುಧವಾರ ಕಲಬುರಗಿಯ ನಯಾ ಮೊಹಲ್ಲಾದಲ್ಲಿ ಹಮ್ಮಿಕೊಳ್ಳಲಾಯಿತು.
ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ.ಸಿದ್ದು ಪಾಟೀಲ್, ತಜ್ಞ ವೈದ್ಯರಾದ ಡಾ.ಉಮಾ ಕಾಂತ್, ಡಾ.ಕೈಸರ್ ಆಯಿಷಾ ಫಾತಿಮಾ, ಡಾ.ಶಿವಶಂಕರ್, ನಗರ ಪ್ರಾ ಆ ಕೇಂದ್ರ ಮಕ್ತಾಂಪುರ್ ಮತ್ತು ಖಾನಾಪುರದ ಆಡಳಿತ ವೈದ್ಯಾಧಿಕಾರಿಗಳು ಹಾಗೂ ನಮ್ಮ ಕ್ಲಿನಿಕ್ ಸಿಬ್ಬಂದಿಗಳು, ಜಿಲ್ಲಾ ಆರ್ ಸಿ ಎಚ್ ವಿಭಾಗದ ಮೇಲ್ವಿಚಾರಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.