ಆಳಂದ: ಸ್ನೇಹಿತರಿಂದಲೇ ಯುವಕನ ಹತ್ಯೆ

Update: 2025-04-26 20:34 IST
ಆಳಂದ: ಸ್ನೇಹಿತರಿಂದಲೇ ಯುವಕನ ಹತ್ಯೆ

ಚನ್ನವೀರ ಗುರುಲಿಂಗಪ್ಪ ಹೀರಾ

  • whatsapp icon

ಕಲಬುರಗಿ: ಹಳೆಯ ವೈಷಮ್ಯದಿಂದಾಗಿ ಯುವಕನೊಬ್ಬನಿಗೆ ತನ್ನ ಗೆಳೆಯರೇ ಸೇರಿ ಚಾಕುವಿನಿಂದ ಇರಿದು ಭೀಕರ ಹತ್ಯೆ ಮಾಡಿರುವ ಘಟನೆ ಆಳಂದ ತಾಲ್ಲೂಕಿನ ನರೋಣಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ನರೋಣಾದ ಚನ್ನವೀರ ಗುರುಲಿಂಗಪ್ಪ ಹೀರಾ (24) ಹತ್ಯೆಗೀಡಾದ ಯುವಕ ಎಂದು ಗುರುತಿಸಲಾಗಿದೆ.

ಜನವರಿಯಲ್ಲಿ ಆಯೋಜಿಸಿದ್ದ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಡೆದಿದ್ದ ಮನಸ್ತಾಪ ಹಿನ್ನಲೆ ಯುವಕ ಚನ್ನವೀರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ರವಿಚಂದ್ರ ಓಂಕಾರ, ಮಹಾದೇವ ಪೀರಶೆಟ್ಟಿ, ಜಗದೇವಪ್ಪ ಪೀರಶೆಟ್ಟಿ, ಶಂಕರ ವಾಲಿ  ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ದೂ ಶ್ರೀನಿವಾಸುಲು, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಯಾತನೂರ, ಪಿಎಸ್‌ಐ ಸಿದ್ದರಾಮ ನಿಂಬರ್ಗಾ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯುವಕನ ತಂದೆ ಗುರುಲಿಂಗಪ್ಪ ಹೀರಾ ದೂರಿನ ಮೇರೆಗೆ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News