ಉದ್ಯಾವದಲ್ಲಿ ರಕ್ತ ವರ್ಗೀಕರಣ ಶಿಬಿರ
Update: 2023-07-17 20:47 IST

ಉದ್ಯಾವರ, ಜು.17: ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ರಕ್ತ ವರ್ಗೀಕರಣ ಹಾಗೂ ವೈದ್ಯಕೀಯ ತಪಾಸಣಾ ಶಿಬಿರವು ಉಡುಪಿಯ ಲಂಬೋರ್ಡ್ ಸ್ಮಾರಕ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಇತ್ತೀಚೆಗೆ ನಡೆಯಿತು.
ಜೆಸಿಐ ಕಟಪಾಡಿಯ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಟಪಾಡಿ ಜೇಸೀ ಅಧ್ಯಕ್ಷೆ ಜ್ಯೋತಿ ಶಂಕರ್, ಮಾಜಿ ವಲಯಾಧ್ಯಕ್ಷ ಹರಿಶ್ಚಂದ್ರ ಅಮೀನ್, ನಿಕಟಪೂರ್ವ ಅಧ್ಯಕ್ಷ ಪ್ರವೀಣ್ ಪೂಜಾರಿ, ಕಾರ್ಯದರ್ಶಿ ವಿಜೇತ್ ಪೂಜಾರಿ, ಕೋಶಾಧಿಕಾರಿ ಗೌರವ್ ಜತ್ತನ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಕಾರಂತ್, ಸದಸ್ಯ ಕೃಷ್ಣಕುಮಾರ್ ರಾವ್ ಮಟ್ಟು, ಶಾಲಾ ಮುಖ್ಯಶಿಕ್ಷಕಿ ಹೇಮಲತಾ ಉಪಸ್ಥಿತರಿದ್ದರು.
ಲಂಬೋರ್ಡ್ ಸ್ಮಾರಕ ಆಸ್ಪತ್ರೆಯ ಡಾ. ಗಣೇಶ್ ಕಾಮತ್, ಪಿಆರ್‌ಓ ರೋಹಿ ರತ್ನಾಕರ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಮಕ್ಕಳ ತಪಾಸಣೆ ನಡೆಸಿದರು.