ಕಾಸರಗೋಡು: ಮನೆಯ ಶೆಡ್‌ನಲ್ಲಿ ತಿಮಿಂಗಿಲದ ಅಸ್ಥಿಪಂಜರ ಪತ್ತೆ
ಕಾಸರಗೋಡು: ಸುಮಾರು ಒಂದೂವರೆ ದಶಕದ ಹಿಂದಿನ ತಿಮಿಂಗಿಲದ ಅಸ್ಥಿಪಂಜರವು ಮಂಜೇಶ್ವರ ಸಮೀಪದ ಮನೆಯೊಂದರ ಶೆಡ್ ನಲ್ಲಿ ಪತ್ತೆಯಾಗಿದೆ.
ಮಂಜೇಶ್ವರ ಕಣ್ವತೀರ್ಥದ ಕರ್ನಾಟಕ ಮೂಲದ ವ್ಯಕ್ತಿಯೋರ್ವರ ಮಾಲಕತ್ವದ ಸುಮಾರು 15 ಎಕರೆಯಷ್ಟು ಸ್ಥಳವೊಂದರ ಶೆಡ್ ನಿಂದ ಕಾಸರಗೋಡು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದ ಮಾಲಕನನ್ನು ಸಂಪರ್ಕಿಸಿದಾಗ 2007ರಲ್ಲಿ ಕಣ್ವತೀರ್ಥ ಕಡಲ ಕೆನಾರೆಯಲ್ಲಿ ತಿಮಿಂಗಿಲದ ಅಸ್ಥಿಪಂಜರ ದಾಸ್ತಾನಿಸಿರಿಸಿದ್ದಾಗಿ ಇದಕ್ಕಾಗಿ 27 ಸಾವಿರ ರೂ . ವೆಚ್ಚದಲ್ಲಿ ಶೆಡ್ ನಿರ್ಮಿಸಿದ್ದಾಗಿ ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಸ್ಥಿಪಂಜರವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಸ್ಥಿ ಪಂಜರದ ಅವಶೇಷಗಳನ್ನು ಡಿ.ಎನ್.ಎ ಪರೀಕ್ಷೆಗೊಳಪಡಿಸಲಾಗುವುದು ಎಂದು ಅರಣ್ಯ ವಲಯಾಧಿಕಾರಿ ತಿಳಿಸಿದ್ದಾರೆ. ವರದಿ ಲಭಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.