ಕಾಸರಗೋಡು: ಪತಿ ಮೃತಪಟ್ಟ ಗಂಟೆಗಳೊಳಗೆ ಪತ್ನಿಯೂ ಹೃದಯಾಘಾತದಿಂದ ಮೃತ್ಯು

Update: 2025-01-17 16:58 IST
ಕಾಸರಗೋಡು: ಪತಿ ಮೃತಪಟ್ಟ ಗಂಟೆಗಳೊಳಗೆ ಪತ್ನಿಯೂ ಹೃದಯಾಘಾತದಿಂದ ಮೃತ್ಯು
  • whatsapp icon

ಕಾಸರಗೋಡು: ಪತಿ ಮೃತಪಟ್ಟ ಗಂಟೆಗಳೊಳಗೆ ಪತ್ನಿಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಾಡೂರು ಎಂಬಲ್ಲಿ ನಡೆದಿದೆ.

ಬಾಡೂರು ಪದವಿನ ಸಂಜೀವ (55) ಮತ್ತು ಅವರ ಪತ್ನಿ ಸುಂದರಿ (50) ಮೃತಪಟ್ಟವರು.

ಸಂಜೀವ ಗುರುವಾರ ಮಧ್ಯಾಹ್ನ ಉದ್ಯೋಗ ಖಾತರಿ ಕೆಲಸ ನಿರ್ವಹಿಸುತ್ತಿದ್ದಾಗ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ತಲಪಿದರೂ ಜೀವ ಉಳಿಸಲಾಗಳಿಲ್ಲ. ಮೃತದೇಹವನ್ನು ರಾತ್ರಿ ಮನೆಗೆ ತಂದು ಅಂತ್ಯಸಂಸ್ಕಾರ ನಡೆಸಲಾಯಿತು. ರಾತ್ರಿ ಎರಡು ಗಂಟೆ ಸುಮಾರಿಗೆ ಸುಂದರಿ ಕುಸಿದು ಬಿದ್ದಿದ್ದು, ಕೂಡಲೇ ಕುಂಬಳೆಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ತಡರಾತ್ರಿ ಅವರೂ ಮೃತಪಟ್ಟರು.

ಸುಂದರಿ ಸಮೀಪದ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವ ಹಿಸುತ್ತಿದ್ದರು. ಮೃತರು ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News