ಮಂಡ್ಯ | ಕೋಳಿ ಸ್ವಚ್ಛ ಮಾಡುವ ಗ್ರೈಂಡರ್‌ನಿಂದ ವಿದ್ಯುತ್ ಹರಿದು ಯುವಕ ಮೃತ್ಯು
Update: 2025-03-19 22:30 IST

ಸಾಂದರ್ಭಿಕ ಚಿತ್ರ
ಮಂಡ್ಯ : ಕೋಳಿ ಸ್ವಚ್ಛ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸಾವಿಗೀಡಾಗಿರುವ ಘಟನೆ ತಾಲೂಕಿನ ಕೆರಗೋಡು ಹೋಬಳಿ ಬಿಳಿದೇಗಲು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಹಂಚಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ಪುತ್ರ ಸಂಜಯ್(22) ಸಾವಿಗೀಡಾದ ಯುವಕನೆಂದು ತಿಳಿದು ಬಂದಿದೆ.
ಕೋಳಿ ಸ್ವಚ್ಛ ಮಾಡುವ ಗ್ರೈಂಡರ್‌ನಿಂದ ವಿದ್ಯುತ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.