ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ನರಮೇಧ ಅತ್ಯಂತ ಹೇಯ ಕೃತ್ಯ : ಯು.ಟಿ.ಖಾದರ್‌

Update: 2025-04-23 12:11 IST
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ನರಮೇಧ ಅತ್ಯಂತ ಹೇಯ ಕೃತ್ಯ : ಯು.ಟಿ.ಖಾದರ್‌

ಯು.ಟಿ.ಖಾದರ್‌

  • whatsapp icon

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಪ್ರವಾಸಿಗರ ನರಮೇಧ ಅತ್ಯಂತ ಹೇಯ ಕೃತ್ಯ. ಇದು ದೇಶದ ಪ್ರತಿಯೊಬ್ಬರಿಗೂ ಅತ್ಯಂತ ನೋವಿನ ಸಂಗತಿ ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌ ಹೇಳಿದ್ದಾರೆ.

ಈ ಸಂಬಂಧ ಫೇಸ್‌ಬುಕ್‌ ಪೋಸ್ಟ್‌ ಹಂಚಿಕೊಂಡಿರುವ ಅವರು, ಉಗ್ರರ ಕ್ರೌರ್ಯಕ್ಕೆ ಬಲಿಯಾದ ಪ್ರವಾಸಿಗರಿಗೆ ನನ್ನ ತೀವ್ರ ಸಂತಾಪಗಳು. ಈ ಪೈಕಿ ನಮ್ಮ ಕರ್ನಾಟಕದ ಇಬ್ಬರು ಬಲಿಯಾಗಿರುವುದು ಅತ್ಯಂತ ದುಃಖದ ವಿಚಾರ. ಮೃತರ ಕುಟುಂಬಕ್ಕೆ ಸಾಂತ್ವನಗಳನ್ನು ಸಲ್ಲಿಸುತ್ತಾ, ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ, ಅಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿ ತಾಲ್ನಾಡಿಗೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News