ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಯಾಗುವ ಶಕ್ತಿ ಇಲ್ಲ: ಜಿ.ಟಿ.ದೇವೇಗೌಡ

Update: 2024-01-03 06:35 GMT

ಮೈಸೂರು, ಜ.3: "ಈ ದೇಶದ ಪ್ರಧಾನಿ ಆಗುವ ಶಕ್ತಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇಲ್ಲ. ಪ್ರಧಾನ ಮಂತ್ರಿ ಆಗುವ ಶಕ್ತಿ ಇರುವುದು ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ" ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಕ ದೇಶ, ಏಕ ವ್ಯಕ್ತಿ, ಏಕ ಕಾನೂನು ಆಗಬೇಕು ಎನ್ನುವುದು ನರೇಂದ್ರ ಮೋದಿಯವರ ಇಂಗಿತ. ಹಾಗಾಗಿ ಪ್ರಧಾನ ಮಂತ್ರಿ ಆಗುವ ಶಕ್ತಿ, ಅರ್ಹತೆ ನರೇಂದ್ರ ಮೋದಿ ಅವರಿಗೆ ಬಿಟ್ಟರೆ ದೇಶದಲ್ಲಿ ಬೇರೆ ಯಾರಿಗೂ ಇಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ 'ಇಂಡಿಯಾ' ಮೈತ್ರಿಕೂಟದಲ್ಲಿರುವ ಅನೇಕರು ನರೇಂದ್ರ ಮೋದಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಐದು ಸ್ಥಾನವನ್ನು ಬಿಜೆಪಿ ಪಕ್ಷದವರು ಬಿಟ್ಟುಕೊಡಲಿದ್ದಾರೆ. ಮಂಡ್ಯ, ಮೈಸೂರು, ಹಾಸನ, ತುಮಕೂರು, ಕೋಲಾರ, ರಾಯಚೂರು, ವಿಜಯಪುರ ಸೇರಿದಂತೆ ಹಲವು ಕಡೆಗಳಲ್ಲಿ ನಮ್ಮ ಶಕ್ತಿ ಪ್ರಬಲವಾಗಿದೆ. ನಾವು ಮೂರು, ನಾಲ್ಕು ಕಡೆ ಅಥವಾ ಇನ್ನೆಷ್ಟು ಕಡೆಗಳಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ನಮಗೆ ಅವರು ಎಷ್ಟು ಸ್ಥಾನ ಬಿಟ್ಟುಕೊಡುತ್ತಾರೆ ಎನ್ನುವುದು ಮುಖ್ಯ ಅಲ್ಲ, ಈ ದೇಶದಲ್ಲಿ ಮೂರನೇ ಬಾರಿಗೂ ನರೇಂದ್ರ ಮೋದಿಯೇ ಪ್ರಧಾನಮಂತ್ರಿ ಆಗಬೇಕು ಎನ್ನುವುದು ಮುಖ್ಯ. ಹಾಗಾಗಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.

ಜಾತ್ಯತೀತ ಶಕ್ತಿಗಳೆಲ್ಲಾ ಒಂದಾಗಿ ನರೇಂದ್ರ ಮೋದಿಯವರಿಗೆ ಬೆಂಬಲ ನೀಡಲಿದ್ದಾರೆ. ಈ ದೇಶಕ್ಕೆ ಮೋದಿ ಒಬ್ಬರೇ ಪ್ರಧಾನಿ. ಅವರನ್ನು ಬಿಟ್ಟರೆ ಇನ್ಯಾರಿಗೂ ಆ ಶಕ್ತಿ ಇಲ್ಲ ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News