ಕಾಶ್ಮೀರದಲ್ಲಿ ಮಡಿದವರ ಸಾವಿಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು : ಎಂ.ಲಕ್ಷ್ಮಣ್

Update: 2025-04-25 21:33 IST
ಕಾಶ್ಮೀರದಲ್ಲಿ ಮಡಿದವರ ಸಾವಿಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು : ಎಂ.ಲಕ್ಷ್ಮಣ್

ಎಂ.ಲಕ್ಷ್ಮಣ್‌

  • whatsapp icon

ಮೈಸೂರು : ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಕಾಶ್ಮೀರದಲ್ಲಿ 3,982 ಮಂದಿ ಸಾವನ್ನಪ್ಪಿದ್ದು, ಹೀಗೆ ಮಡಿದವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಒತ್ತಾಯಿಸಿದರು.

ಮೈಸೂರಿನ ಕಾಂಗ್ರೆಸ್‌ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2014ರಲ್ಲಿ ಮೋದಿ ನೇತೃತ್ವದ ಸರಕಾರ ರಚನೆ ಆದಮೇಲೆ ಕಾಶ್ಮಿರದಲ್ಲಿ 3,982 ಮಂದಿ ಮೃತಪಟ್ಟಿದ್ದಾರೆ. ಕಳೆದ 2019 ರಲ್ಲಿ ಪುಲ್ವಾಮ ದಾಳಿ ವರದಿ ಏನಾಯಿತು. ಆರ್‌ಡಿಎಕ್ಸ್‌ ಗಡಿದಾಟಿ ಒಳಗೆ ಹೇಗೆ ಬಂತು. ಇದರ ಉತ್ತರವನ್ನು ಜನರಿಗೆ ತಿಳಿಸಿ. ಪುಲ್ವಾಮ ದಾಳಿಯನ್ನು ಬಳಸಿಕೊಂಡು 2019 ಚುನಾವಣೆ ಗೆದ್ದಿರೋದು. ಈಗ ಕಾಶ್ಮಿರದ ಪಹಲ್ಗಾಮ್‌ ದಾಳಿಯನ್ನು ಬಳಸಿಕೊಂಡು ಬಿಹಾರ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಭಾರತ ಭದ್ರತಾ ವಿಚಾರದಲ್ಲಿ ಇಡೀ ಜಗ್ಗತಿನ ಮುಂದೆ ತಲೆ ತಗ್ಗಿಸುವಂತಾಗಿದೆ. ಒಂದು ಹಳ್ಳಿಯಲ್ಲಿ ಜಾತ್ರೆ ನಡೆದರೆ, ಅಲ್ಲಿ 4 ಮಂದಿ ಪೊಲೀಸ್‌ ಇರುತ್ತಾರೆ, ಇಲ್ಲ ಇಬ್ಬರು ಕಾನ್‌ ಸ್ಟೇಬಲ್‌ ಇರುತ್ತಾರೆ. ಅಂಥದರಲ್ಲಿ ಕಾಶ್ಮಿರದ ಪಹಲ್ಗಾಮ್‌ ಗೆ ಸರಿಯಾದ ರಸ್ತೆ ಮಾರ್ಗವಿಲ್ಲ ಆದರೂ ಪ್ರತಿದಿನ ಒಂದರಿಂದ ಎರಡು ಸಾವಿರ ಪ್ರವಾಸಿಗರು ಬಂದು ಹೋಗುತ್ತಾರೆ. ಅಲ್ಲಿ 3.67ಲಕ್ಷ ಮಿಲಿಟರಿ ಹುದ್ದೆಯಲ್ಲಿ 4 ಲಕ್ಷ ಜನ ಸೈನಿಕರು ಕೆಲಸ ಮಾಡುತ್ತಿದ್ದಾರೆ. ಆದರೇ ಅಲ್ಲಿಗೆ ಒಬ್ಬ ಪೊಲೀಸ್‌ನವರು ಇಲ್ಲ. ಮಿಲಿಟರಿಯವರು ಇಲ್ಲ ಏಕೆ? ಇದಕ್ಕೆ ಕೇಂದ್ರ ಸರಕಾರ ಉತ್ತರ ನೀಡಲೇಬೇಕು ಎಂದು ಒತ್ತಾಯಿಸಿದರು.

ಕಾಶ್ಮಿರದ ಪ್ರವಾಸಕ್ಕೆ ತೆರಳಿದ ಕನ್ನಡಿಗರನ್ನು ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಂತೋಷ್‌ ಲಾಡ್‌ ವಿಶೇಷ ವಿಮಾನದಲ್ಲಿ ಕರೆತಂದಿರುವುದಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಬಿಜೆಪಿಯವರು ಇದರ ಬಿಟ್ಟಿ ಪ್ರಚಾರ ಪಡೆದುಕೊಳ್ಳುವ ಆಯೋಗ್ಯರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರಾಧ್ಯಕ್ಷ ಆರ್.ಮೂರ್ತಿ, ನಗರ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಮಹೇಶ್‌, ಮುಖಂಡರಾದ ಮೋಹನ್‌ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News