ಪಿರಿಯಾಪಟ್ಟಣ | ಭೂ ಸಮಸ್ಯೆ ಬಗೆಹರಿಸುವಂತೆ ಒತ್ತಾಯ; ಮೈಮೇಲೆ ಸೆಗಣಿ ಸುರಿದು ಧರಣಿ
Update: 2025-04-26 00:40 IST

ಮೈಸೂರು : ಪಿರಿಯಾಪಟ್ಟಣ ತಾಲೂಕಿನ ಮುಮ್ಮಡಿ ಕಾವಲ್ ಗ್ರಾಮಕ್ಕೆ ಸಂಬಂಧಿಸಿದ ಭೂ ಸಮಸ್ಯೆಗೆ ಸಂಬಂಧಿಸಿದಂತೆ ಮೂರು ವರ್ಷಗಳಿಂದ ಧರಣಿ ನಡೆಸುತ್ತಿರುವ ದಸಂಸ ಮುಖಂಡರು ಶುಕ್ರವಾರ ಮೈಮೇಲೆ ಸೆಗಣಿ ಸುರಿದುಕೊಂಡು ಧರಣಿ ನಡೆಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಎ.26ರಂದು ಶನಿವಾರ ಸಿಎಂ ಸಿದ್ದರಾಮಯ್ಯ ಅವರು ಪಿರಿಯಾಪಟ್ಟಣಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಭೇಟಿಗೆ ನಿರಾಕರಿಸಿದ ತಾಲೂಕು ಆಡಳಿತದ ವಿರುದ್ಧ ದಸಂಸ ಮುಖಂಡರಾದ ಸಿ.ಎಸ್.ಜಗದೀಶ್ ಮತ್ತು ದೊಡ್ಡಯ್ಯ ಮುಮ್ಮಡಿ ಕಾವಲ್ ಅವರು ಸಿಎಂ ಭೇಟಿಗೆ ಅವಕಾಶ ನೀಡುವಂತೆ ಒತ್ತಾಯಿಸಿ ಧರಣಿ ನಡೆಸಿದರು.