ಚಂದ್ರಯಾನ ಯಶಸ್ಸಿನ ಬೆನ್ನಲ್ಲೇ ಇಸ್ರೋ ಮುಖ್ಯಸ್ಥ ಎಸ್‌ ಸೋಮನಾಥ್‌ ಅವರ ಹಳೆ ವೀಡಿಯೋ ವೈರಲ್‌

Update: 2023-08-24 14:03 GMT

ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವ ಭಾಗದಲ್ಲಿ ಕಾಲಿಟ್ಟ ಪ್ರಥಮ ದೇಶವೆಂಬ ಹೆಗ್ಗಳಿಕೆಗೆ ಕಾರಣವಾದ ಚಂದ್ರಯಾನ-3 ಮಿಷನ್‌ ಯಶಸ್ಸಿನ ಬೆನ್ನಲ್ಲೇ ಇಸ್ರೋ ಮುಖ್ಯಸ್ಥ ಎಸ್‌ ಸೋಮನಾಥ್‌ ಅವರ ಹಳೆಯ ವೀಡಿಯೋವೊಂದು ವೈರಲ್‌ ಆಗಿದೆ. ಈ ವೀಡಿಯೋ ಕ್ಲಿಪ್‌ನಲ್ಲಿ ಇಸ್ರೋ ಮುಖ್ಯಸ್ಥ ತಮ್ಮ ಸಹೋದ್ಯೋಗಿಗಳೊಂದಿಗೆ ನೃತ್ಯ ಮಾಡುತ್ತಿರುವುದು ಕಾಣಿಸುತ್ತದೆ.

ಟ್ವಿಟರ್‌ ಬಳಕೆದಾರರೊಬ್ಬರು ಈ ವೀಡಿಯೋವನ್ನು ಬುಧವಾರ ರಾತ್ರಿ ಶೇರ್‌ ಮಾಡಿದ್ದರಿಂದ ಚಂದ್ರಯಾನ-3 ಯಶಸ್ಸಿನ ನಂತರ ನಡೆದ ಪಾರ್ಟಿಯ ವೀಡಿಯೋ ಇದೆಂದು ಅಂದಾಜಿಸಲಾಗಿತ್ತು.

ವೀಡಿಯೋಗೆ “ಚೀಫ್‌ ಡಾ. ಎಸ್‌ ಸೋಮನಾಥ್‌ & ಟೀಮ್‌ ಇಸ್ರೋ” ಎಂಬ ಶೀರ್ಷಿಕೆ ನೀಡಲಾಗಿತ್ತು.

ವೀಡಿಯೋದಲ್ಲಿ ಇಸ್ರೋ ತಂಡವು ಪಂಜಾಬಿ-ಇಂಗ್ಲಿಷ್‌ ಹಾಡಿಗೆ ಕುಣಿಯುತ್ತಿತ್ತು.

ಆದರೆ ಈ ವೀಡಿಯೋ ಚಂದ್ರಯಾನ ಯಶಸ್ಸಿನ ನಂತರದ ಪಾರ್ಟಿಯದ್ದಲ್ಲ ಹಾಗೂ ಬೇರೆ ಸಂದರ್ಭದ್ದಾಗಿದೆ. ಆದರೆ ಇದು ಇದೇ ವರ್ಷದ ವೀಡಿಯೋ ಎಂದು ಆ ಸಂದರ್ಭ ಉಪಸ್ಥಿತರಿದ್ದ ಪತ್ರಕರ್ತರೊಬ್ಬರು ಸ್ಪಷ್ಟಪಡಿಸಿದ್ದಾರೆಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News