ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ: ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಆರೋಪ

Update: 2025-04-30 14:00 IST
ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ: ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಆರೋಪ

Photo credit: indiatoday.in

  • whatsapp icon

ವಿಜಯವಾಡ: ನನ್ನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಬುಧವಾರ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವೈ ಎಸ್ ಶರ್ಮಿಳಾ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳೇ, ವಿಜಯವಾಡದ ನಿವಾಸದಲ್ಲಿ ನನ್ನನ್ನು ಏಕೆ ಗೃಹ ಬಂಧನದಲ್ಲಿರಿಸಲಾಗಿದೆ? ಯಾವ ಕಾರಣಕ್ಕಾಗಿ ಗೃಹ ಬಂಧನದಲ್ಲಿರಿಸಲಾಗಿದೆ? ದಯವಿಟ್ಟು ಆಂಧ್ರ ಪ್ರದೇಶದ ಜನರಿಗೆ ತಿಳಿಸಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಚೇರಿಗೆ ಹೋಗುವುದು ಈಗ ಅಪರಾಧವೇ? ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಲು ನೀವು ಏಕೆ ಪ್ರಯತ್ನಿಸುತ್ತಿದ್ದೀರಿ? ನಿಮ್ಮ ಸರಕಾರ ಏಕೆ ಹೆದರುತ್ತಿದೆ ಎಂದು ವೈ ಎಸ್ ಶರ್ಮಿಳಾ ಪ್ರಶ್ನಿಸಿದ್ದಾರೆ.

ವೈ ಎಸ್ ಶರ್ಮಿಳಾ ಅವರು ಗೃಹ ಬಂಧನದಿಂದ ಬಿಡುಗಡೆಯಾದ ನಂತರ ತಮ್ಮ ಬೆಂಬಲಿಗರನ್ನು ಭೇಟಿಯಾಗಿದ್ದು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆ ಸೇರಿದಂತೆ ಹಲವು ವಿಷಯಗಳಲ್ಲಿ ರಾಜ್ಯ ಸರಕಾರ ʼಘೋರ ಅನ್ಯಾಯʼ ಎಸಗಿದೆ ಎಂದು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News