ಬಿಹಾರ | ಮದ್ಯಪಾನ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ತೆರಳಿದ ಪೊಲೀಸರ ಮೇಲೆ ಗ್ರಾಮಸ್ಥರಿಂದ ದಾಳಿ

Update: 2025-04-10 13:24 IST
ಬಿಹಾರ | ಮದ್ಯಪಾನ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲು ತೆರಳಿದ ಪೊಲೀಸರ ಮೇಲೆ ಗ್ರಾಮಸ್ಥರಿಂದ ದಾಳಿ

Photo | NDTV

  • whatsapp icon

ಪಾಟ್ನಾ: ಬಿಹಾರದ ಸಿವಾನ್‌ನಲ್ಲಿ ಮದ್ಯಪಾನ ಮಾಡಿದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆಯಲು ತೆರಳಿದ ಪೊಲೀಸರ ಮೇಲೆ ಗ್ರಾಮಸ್ಥರ ಗುಂಪೊಂದು ದಾಳಿ ನಡೆಸಿದೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬಿಹಾರದಲ್ಲಿ ಮದ್ಯಪಾನ ಮಾರಾಟ, ಸಂಗ್ರಹಣೆಯನ್ನು ನಿಷೇಧಿಸಲಾಗಿದೆ. ಮದ್ಯಪಾನ ಮಾಡಿದ ವ್ಯಕ್ತಿಯನ್ನು ಬಂಧಿಸಲು ಅಕೋಲ್ಹಿ ಗ್ರಾಮಕ್ಕೆ ಪೊಲೀಸರ ತಂಡ ತೆರಳಿತ್ತು. ಈ ವೇಳೆ ಗ್ರಾಮಸ್ಥರ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿತು.  

ಪೊಲೀಸರು ಗ್ರಾಮಸ್ಥರ ಮೇಲೆ ದಾಳಿ ಮಾಡುವ ವೀಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿ ಕೆಲವರು ಪೊಲೀಸರನ್ನು ತಳ್ಳುವುದು, ಕಪಾಳಮೋಕ್ಷ ಮಾಡುವುದು ಸೆರೆಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News