ಪಶ್ಚಿಮ ಬಂಗಾಳ, ಹರಿಯಾಣ, ಉತ್ತರಾಖಂಡದಲ್ಲಿ CAA ಅಡಿಯಲ್ಲಿ ಕೇಂದ್ರದಿಂದ ಪೌರತ್ವ ನೀಡಲು ಆರಂಭ : ಗೃಹ ಸಚಿವಾಲಯ
Update: 2024-05-29 15:14 GMT
ಹೊಸದಿಲ್ಲಿ : ಪಶ್ಚಿಮ ಬಂಗಾಳ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ ಸಿಎಎ ಅಡಿಯಲ್ಲಿ ಪೌರತ್ವ ನೀಡಲು ಕೇಂದ್ರ ಸರ್ಕಾರ ಬುಧವಾರ ಆರಂಭಿಸಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮೂರು ರಾಜ್ಯಗಳಲ್ಲಿನ ಅರ್ಜಿದಾರರಿಗೆ ಆಯಾ ರಾಜ್ಯದಲ್ಲಿ ರಚಿಸಲಾದ ಸಮಿತಿಯು ಬುಧವಾರ ಪೌರತ್ವವನ್ನು ನೀಡಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ದಿಲ್ಲಿಯ ಕೇಂದ್ರ ಸಮಿತಿಯು ನೀಡಿದ ಪೌರತ್ವ (ತಿದ್ದುಪಡಿ) ನಿಯಮಗಳು, 2024 ರ ಅಧಿಸೂಚನೆಯ ನಂತರ ಪೌರತ್ವ ಪ್ರಮಾಣಪತ್ರಗಳ ಮೊದಲ ಪ್ರತಿಯನ್ನು ಮೇ 15 ರಂದು ಕೇಂದ್ರ ಗೃಹ ಕಾರ್ಯದರ್ಶಿಯವರು ದಿಲ್ಲಿಯಲ್ಲಿ ಅರ್ಜಿದಾರರಿಗೆ ಹಸ್ತಾಂತರಿಸಿದ್ದರು.
ಡಿಸೆಂಬರ್ 31, 2014 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ವಲಸಿಗರಿಗೆ ಭಾರತೀಯ ರಾಷ್ಟ್ರೀಯತೆಯನ್ನು ನೀಡಲು CAA ಅನ್ನು ಡಿಸೆಂಬರ್ 2019 ರಲ್ಲಿ ಜಾರಿಗೊಳಿಸಲಾಗಿದೆ.