ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರುಗಳ ಹೊಸ ಪಟ್ಟಿ ಬಿಡುಗಡೆಗೊಳಿಸಿದ ಚೀನಾ
Update: 2024-04-01 11:10 GMT
ಬೀಜಿಂಗ್: ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ 30 ಹೊಸ ಹೆಸರುಗಳನ್ನು ಹೊಂದಿದ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆಗೊಳಿಸಿದೆ. ಅರುಣಾಚಲ ಪ್ರದೇಶದ ಭೂಭಾಗ ತನಗೆ ಸೇರಿದ್ದು ಎಂದು ಚೀನಾ ಹೇಳುತ್ತಲೇ ಬಂದಿದ್ದರೆ, ಅದು ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಸರ್ಕಾರ ಪುನರುಚ್ಛರಿಸಿದೆ.
ಈ ನಡುವೆ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶಕ್ಕೆ ಚೀನಾದ ಹೆಸರಾದ ಝಂಗ್ನನ್‌ನ 30 ಸ್ಥಳಗಳ ಹೆಸರುಗಳನ್ನು ಚೀನಾ ಬಿಡುಗಡೆಗೊಳಿಸಿದೆ.
ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳುತ್ತಿದೆ.
ಆರು ಸ್ಥಳಗಳ ಹೊಸ ಹೆಸರುಗಳುಳ್ಳ ಮೊದಲ ಪಟ್ಟಿಯನ್ನು ಚೀನಾ 2017ರಲ್ಲಿ ಬಿಡುಗಡೆಗೊಳಿಸಿದ್ದರೆ 15 ಸ್ಥಳಗಳ ಹೆಸರುಗಳನ್ನೊಳಗೊಂಡ ಎರಡನೇ ಪಟ್ಟಿ 2021 ರಲ್ಲಿ ಹಾಗೂ 11 ಸ್ಥಳಗಳ ಹೆಸರುಗಳುಳ್ಳ ಮೂರನೇ ಪಟ್ಟಿಯನ್ನು 2023 ರಲ್ಲಿ ಬಿಡುಗಡೆಗೊಳಿಸಿತ್ತು.