'ಈಡಿ, ಸಿಬಿಐ, ಐಟಿ- ಎನ್ ಡಿಎಯಲ್ಲಿರುವ 3 ಪ್ರಬಲ ಪಕ್ಷಗಳು': ಉದ್ಧವ್ ಠಾಕ್ರೆ ವ್ಯಂಗ್ಯ

"ಎನ್ ಡಿಎಯಲ್ಲಿ 36 ಪಕ್ಷಗಳಿವೆ. ಈಡಿ, ಸಿಬಿಐ ಮತ್ತು ಆದಾಯ ತೆರಿಗೆ (ಐಟಿ) ಮಾತ್ರ ಎನ್ ಡಿಎಯಲ್ಲಿ ರುವ ಮೂರು ಪ್ರಬಲ ಪಕ್ಷಗಳಾಗಿವೆ. ಇತರ ಪಕ್ಷಗಳು ಎಲ್ಲಿವೆ? ಕೆಲವು ಪಕ್ಷಗಳು ಒಬ್ಬ ಸಂಸದರನ್ನು ಸಹ ಹೊಂದಿಲ್ಲ," ಎಂದು ಠಾಕ್ರೆ ಸಂದರ್ಶನದಲ್ಲಿ ಹೇಳಿದರು. ಇದರ ಮೊದಲ ಭಾಗ ಇಂದು 'ಸಾಮ್ನಾ'ದಲ್ಲಿ ಪ್ರಕಟವಾಗಿದೆ.;

Update: 2023-07-26 15:07 IST
ಈಡಿ, ಸಿಬಿಐ, ಐಟಿ- ಎನ್ ಡಿಎಯಲ್ಲಿರುವ 3 ಪ್ರಬಲ ಪಕ್ಷಗಳು: ಉದ್ಧವ್ ಠಾಕ್ರೆ ವ್ಯಂಗ್ಯ
  • whatsapp icon

ಮುಂಬೈ: ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಲ್ಲಿ (ಎನ್ ಡಿಎ) ಜಾರಿ ನಿರ್ದೇಶನಾಲಯ(ಈಡಿ), ಆದಾಯ ತೆರಿಗೆ ಇಲಾಖೆ(ಐಟಿ) ಹಾಗೂ ಸಿಬಿಐ ಮಾತ್ರ "ಮೂರು ಪ್ರಬಲ ಪಕ್ಷಗಳಾಗಿವೆ" ಎಂದು ವ್ಯಂಗ್ಯವಾಡಿದ್ದಾರೆ.

ಶಿವಸೇನಾ (ಯುಬಿಟಿ) ಮುಖವಾಣಿ 'ಸಾಮ್ನಾ'ದ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಅವರಿಗೆ ನೀಡಿರುವ ಸಂದರ್ಶನವೊಂದರಲ್ಲಿ ಠಾಕ್ರೆ ಅವರು ಮಣಿಪುರದ ಹಿಂಸಾಚಾರದ ಬಗ್ಗೆ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಕ್ಕೆ.ಭೇಟಿ ನೀಡಲೂ ಸಿದ್ಧರಿಲ್ಲ ಎಂದು ಆರೋಪಿಸಿದರು.

ಬಿಜೆಪಿ ನೇತೃತ್ವದ ಎನ್ ಡಿಎಯ ಇತ್ತೀಚಿನ ಸಭೆಯನ್ನು ಟೀಕಿಸಿದ ಠಾಕ್ರೆ, ಚುನಾವಣೆಗಳು ಸಮೀಪಿಸಿದಾಗ, ಬಿಜೆಪಿಗೆ ಅದರ ಸರಕಾರವು ಎನ್ ಡಿಎ ಸರಕಾರವಾಗುತ್ತದೆ. ಚುನಾವಣೆ ಮುಗಿದ ನಂತರ ಅದು ಮೋದಿ ಸರಕಾರವಾಗುತ್ತದೆ ಎಂದರು.

ಎನ್ ಡಿಎಯ ಭಾಗವಾಗಿರುವ 38 ಪಕ್ಷಗಳ ನಾಯಕರು ಕಳೆದ ವಾರ ದಿಲ್ಲಿಯಲ್ಲಿ ಸಭೆ ನಡೆಸಿದ್ದರು.

ಅದೇ ದಿನ, ಶಿವಸೇನೆ (UBT) ಸೇರಿದಂತೆ 26 ವಿರೋಧ ಪಕ್ಷಗಳು ಬೆಂಗಳೂರಿನಲ್ಲಿ ಸಭೆ ಸೇರಿದ್ದವು ಹಾಗೂ ಅವರ ಒಕ್ಕೂಟವನ್ನು ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (INDIA) ಎಂದು ಹೆಸರಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಆಡಳಿತಾರೂಢ ಬಿಜೆಪಿ ವಿರೋಧಿಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.

"ಎನ್ ಡಿಎಯಲ್ಲಿ 36 ಪಕ್ಷಗಳಿವೆ. ಈಡಿ, ಸಿಬಿಐ ಮತ್ತು ಆದಾಯ ತೆರಿಗೆ (ಐಟಿ) ಮಾತ್ರ ಎನ್ ಡಿಎಯಲ್ಲಿ ರುವ ಮೂರು ಪ್ರಬಲ ಪಕ್ಷಗಳಾಗಿವೆ. ಇತರ ಪಕ್ಷಗಳು ಎಲ್ಲಿವೆ? ಕೆಲವು ಪಕ್ಷಗಳು ಒಬ್ಬ ಸಂಸದರನ್ನು ಸಹ ಹೊಂದಿಲ್ಲ," ಎಂದು ಠಾಕ್ರೆ ಸಂದರ್ಶನದಲ್ಲಿ ಹೇಳಿದರು. ಇದರ ಮೊದಲ ಭಾಗ ಇಂದು 'ಸಾಮ್ನಾ'ದಲ್ಲಿ ಪ್ರಕಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News