'ಫ್ಲೂವರ್ ಡೇನಿಯಲ್' ಹಾಗೂ ಮೈಕ್ರೋಸಾಫ್ಟ್ ನಿಂದ ಬ್ಯಾರೀಸ್ ಗ್ರೂಪ್ ಗೆ ಗೌರವ

ಹೈದರಾಬಾದ್, ಎ 11 : ಎಪ್ಪತ್ತು ಲಕ್ಷ ಗಂಟೆಗಳ ಸುರಕ್ಷಿತ ಮಾನವ ಸೇವಾವಧಿಯ ಸಾಧನೆಯನ್ನು ಗೌರವಿಸಿ ಬ್ಯಾರೀಸ್ ಗ್ರೂಪ್ ಗೆ ನಿರ್ಮಾಣ ರಂಗದ ಪ್ರತಿಷ್ಠಿತ ಜಾಗತಿಕ ಕನ್ಸಲ್ಟೆಂಟ್ ಸಂಸ್ಥೆ ಫ್ಲೂವರ್ ಡೇನಿಯಲ್ ನಿಂದ ಸ್ಮರಣಿಕೆ ನೀಡಿ ಗೌರವಿಸಲಾಗಿದೆ.



ಹೈದರಾಬಾದ್ ನ ಮೈಕ್ರೋಸಾಫ್ಟ್ ಡೇಟಾ ಸೆಂಟರ್ ಪ್ರಾಜೆಕ್ಟ್ ಹೈಡ್ 01 (HYD 01) ನ ನಿರ್ಮಾಣದಲ್ಲಿ ಬ್ಯಾರೀಸ್ ಗ್ರೂಪ್ ಈ ಸಾಧನೆಯನ್ನು ಮಾಡಿದೆ. ಗಾಯಾಳು ಅಥವಾ ಆರೋಗ್ಯ ಸಮಸ್ಯೆಯಿಂದ ನಿರ್ಮಾಣ ಸೇವಾ ಸ್ಥಗಿತವಾಗದೆ ಈ ಎಪ್ಪತ್ತು ಲಕ್ಷ ಗಂಟೆಗಳ ಸುರಕ್ಷಿತ ಮಾನವ ಸೇವೆಯನ್ನು ಬ್ಯಾರೀಸ್ ಗ್ರೂಪ್ ಒದಗಿಸಿದೆ.


ಇದು ಬ್ಯಾರೀಸ್ ಗ್ರೂಪ್ ನಿರಂತರ ಕಾಪಾಡಿಕೊಂಡು ಬಂದಿರುವ ಅತ್ಯುನ್ನತ ಸುರಕ್ಷತಾ ಗುಣಮಟ್ಟಕ್ಕೆ ಸಂದ ಗೌರವವಾಗಿದೆ. ಆರೋಗ್ಯ ಮತ್ತು ಸುರಕ್ಷತೆಯ ಖಾತರಿ ಹಾಗೂ ಪರಿಸರ ರಕ್ಷಣೆ ಕುರಿತ ಬ್ಯಾರೀಸ್ ಗ್ರೂಪ್ ನ ಬದ್ಧತೆಗೆ ಸಿಕ್ಕಿರುವ ಹೊಸ ಗೌರವವಿದು. ಈ ಹಿಂದೆ ದಿ ವರ್ಲ್ಡ್ ಸೇಫ್ಟಿ ಆರ್ಗನೈಸೇಷನ್ (WSO) ಇಂಡಿಯಾ ಅವಾರ್ಡ್, ಬ್ರಿಟಿಷ್ ಸೇಫ್ಟಿ ಕೌನ್ಸಿಲ್ ಫೈವ್ ಸ್ಟಾರ್ ರೇಟಿಂಗ್ ಹಾಗೂ ದಿ OHSSAI ಫೌಂಡೇಶನ್ ಅವಾರ್ಡ್ ಗಳಿಗೂ ಪಾತ್ರವಾಗಿದೆ. ಬ್ಯಾರೀಸ್ ಗ್ರೂಪ್ ನ ಪ್ರತಿಯೊಬ್ಬರೂ ಶಿಸ್ತು ಹಾಗೂ ನಿಷ್ಠೆಯಿಂದ ಸಲ್ಲಿಸುತ್ತಿರುವ ಸೇವೆಗೆ ಈ ಗೌರವ ಸಲ್ಲುತ್ತದೆ ಎಂದು ಬ್ಯಾರೀಸ್ ಗ್ರೂಪ್ ನ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.