ಗುಜರಾತ್: ಲಘು ಭೂಕಂಪ

Update: 2024-03-17 16:14 GMT

ಸಾಂದರ್ಭಿಕ ಚಿತ್ರ

ಅಹ್ಮದಾಬಾದ್,  ಮಾ. 17: ಗುಜರಾತಿನ ಕಚ್ಛ್ ಜಿಲ್ಲೆಯಲ್ಲಿ ರವಿವಾರ ನಸುಕಿನಲ್ಲಿ 3.3 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ಸಂಶೋಧನಾ ಸಂಸ್ಥೆ (ಐಎಸ್ಐರ್) ತಿಳಿಸಿದೆ.

ಖಾವಡದ 22 ಕಿ.ಮೀ. ಪೂರ್ವ ಆಗ್ನೇಯದಲ್ಲಿ ರವಿವಾರ 12.12ಕ್ಕೆ ಈ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ.

ಪ್ರಾಣ ಅಥವಾ ಸೊತ್ತುಗಳಿಗೆ ಹಾನಿ ಉಂಟಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

ಕಚ್ಛ್ ಜಿಲ್ಲೆ ಹೆಚ್ಚಿನ ಅಪಾಯ ಇರುವ ಭೂಕಂಪ ವಲಯದಲ್ಲಿ ಇದೆ. ಇಲ್ಲಿ ಕಡಿಮೆ ತೀವ್ರತೆಯ ಭೂಕಂಪ ನಿರಂತರ ಸಂಭವಿಸುತ್ತಿರುತ್ತದೆ.

ಈ ತಿಂಗಳಲ್ಲಿ ಕಚ್ಛ್ ಜಿಲ್ಲೆ ಮೂರು ಭೂಕಂಪಗಳಿಗೆ ಸಾಕ್ಷಿಯಾಗಿವೆ. ಮಾರ್ಚ್ 5ರಂದು 3.2 ತೀವ್ರತೆ, ಮಾರ್ಚ್ 11ರಂದು 3.5 ತೀವ್ರತೆಯ ಭೂಕಂಪ ಇಲ್ಲಿ ಸಂಭವಿಸಿವೆ.

 

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News