ಜಾರ್ಖಂಡ್ ನ ಚಂಪೈ ಸರಕಾರದ ವಿಶ್ವಾಸ ಮತದಲ್ಲಿ ಭಾಗಿಯಾಗಲು ಹೇಮಂತ್ ಸೊರೇನ್‌ಗೆ ಅವಕಾಶ
Update: 2024-02-03 12:25 GMT
ರಾಂಚಿ : ಭೂ ಹಗರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಗೆ ಫೆ.5 ರಂದು ನಡೆಯಲಿರುವ ವಿಶ್ವಾಸಮತದಲ್ಲಿ ಭಾಗವಹಿಸಲು ವಿಶೇಷ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬುಧವಾರ ಜಾರಿ ನಿರ್ದೇಶನಾಲಯದಿಂದ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಗಿದೆ. ಹೇಮಂತ್ ಸೊರೇನ್ ಅವರು ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಸರಕಾರದ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ವಿಶ್ವಾಸ ಮತದಲ್ಲಿ ಭಾಗವಹಿಸಲು ಸೊರೇನ್ ಗೆ ಅನುಮತಿಯನ್ನು ನೀಡಿದೆ.
ಫೆ. 5 ರವರೆಗೆ ಹೇಮಂತ್ ಸೋರೆನ್ ಅವರನ್ನು ನ್ಯಾಯಾಲಯವು ಐದು ದಿನಗಳ ಕಾಲ ಈಡಿ ಕಸ್ಟಡಿಗೆ ಒಪ್ಪಿಸಿದೆ. ಹೇಮಂತ್ ಸೊರೇನ್ ಬಂಧನದ ಬಳಿಕ ಚಂಪೈ ಸೊರೆನ್ ಅವರು ಫೆಬ್ರವರಿ 2 ರಂದು ಜಾರ್ಖಂಡ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು