2014 ರಲ್ಲಿ ಮೋದಿ ಪರ ಪ್ರಚಾರ ಮಾಡಿದಕ್ಕೆ ಈಗ ಪ್ರಾಯಶ್ಚಿತ ಪಡುತ್ತೇನೆ: ಸುಬ್ರಮಣಿಯನ್‌ ಸ್ವಾಮಿ

Update: 2024-11-29 17:29 IST
2014 ರಲ್ಲಿ ಮೋದಿ ಪರ ಪ್ರಚಾರ ಮಾಡಿದಕ್ಕೆ ಈಗ ಪ್ರಾಯಶ್ಚಿತ ಪಡುತ್ತೇನೆ: ಸುಬ್ರಮಣಿಯನ್‌ ಸ್ವಾಮಿ
  • whatsapp icon

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿರುವ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಮತ್ತೊಮ್ಮೆ ಪ್ರಧಾನಿ ವಿರುದ್ಧ ಹರಿಹಾಯ್ದಿದ್ದಾರೆ.

2014 ರಲ್ಲಿ ನರೇಂದ್ರ ಮೋದಿ ಅವರ ಪರ ಚುನಾವಣಾ ಪ್ರಚಾರ ಮಾಡಿದಕ್ಕಾಗಿ ನಾನು ಈಗ ಪ್ರಾಯಶ್ಚಿತ ಪಡುತ್ತೇನೆ ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಮೋದಿಯನ್ನು ಸುಳ್ಳುಗಾರ ಎಂದು ಕರೆದ ಅವರು, ಅಕ್ಬರ್‌ ನಿಗೆ ಸರ್ವಸ್ವವನ್ನೂ ಸಮರ್ಪಿಸಿದ ಬೀರಬಲ್‌ ನಂತೆ ಆಗಲು ನಾನು ತಯಾರಿಲ್ಲ ಎಂದು ಮೋದಿ ಕೋಪಗೊಂಡಿದ್ದಾರೆ. 2014 ರಲ್ಲಿ ಮೋದಿ ಪರ ಪ್ರಚಾರ ಮಾಡಿದಕ್ಕೆ ನಾನು ಪ್ರಾಯಶ್ಚಿತ ಪಡುತ್ತೇನೆ. ಸುಳ್ಳುಗಾರ ಆಗಿ ಅವರು ಬದಲಾಗಿದ್ದಾರೆ. ಉದಾಹರಣೆಗೆ, ತಾನು ಪ್ರಧಾನಿಯಾದ 15 ದಿನದಲ್ಲಿ ವಿದೇಶದಲ್ಲಿರುವ ಎಲ್ಲಾ ಕಪ್ಪು ಹಣವನ್ನು ತರುತ್ತೇನೆ ಎಂದು ಅವರು ಹೇಳಿದ್ದರು ಎಂದು ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News